ಮೈಸೂರು,ಮಾರ್ಚ್,31,2022(www.justkannada.in): ಹೃದಯ ಸಂಬಂಧಿ ರಕ್ತ ಪರಿಚಲನೆಗೆ ಸಂಬಂಧಿಸಿದ ನಾನಾ ಹೃದ್ರೋಗಗಳಿಂದ ಬಳಲುತ್ತಿರುವವರಿಗೆ ಮೈಸೂರಿನ ಹೆಬ್ಬಾಳ ಕೆರೆ ಪಕ್ಕದಲ್ಲಿರುವ ಮೈಸೂರಿನ ದಿ ರಿವೈವ್ ಆಸ್ಪತ್ರೆಯಲ್ಲಿರುವ ಮೈಸೂರು ಕಾರ್ಡಿಯಾಕ್ ಇಸಿಪಿ ಸೆಂಟರ್ ನಲ್ಲಿ ಯಾವುದೇ ಶಸಚಿಕಿತ್ಸೆ, ಗಾಯವಿಲ್ಲದ ಅಪರೂಪದ ಎಕ್ಸ್ಟ್ರನಲ್ ಕೌಂಟರ್ ಪಲ್ಸೇಷನ್ (ಇಸಿಪಿ)ಥೆರಪಿ ನೀಡಲಾಗುತ್ತಿದೆ. ಹೃದಯ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗೆ ಈ ರೀತಿಯ ಪರಿಹಾರವಿದೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಕೇಂದ್ರದ ಫಿಜಿಷಿಯನ್, ಹೃದ್ರೋಗ ತಜ್ಞ ಡಾ. ವಿ. ಮೋಹನ್ ಕುಮಾರ್ ತಿಳಿಸಿದರು.
ಒತ್ತಡದ ಜೀವನ ಶೈಲಿ, ದೈಹಿಕ ಚಟುವಟಿಕ ಕಡಿಮೆಯಾಗಿರುವುದು, ಡಯಾಬಿಟಿಸ್, ದುಶ್ಚಟಗಳು, ಕ್ರಮಬದ್ದವಾಗಿ ಆಹಾರ ಸೇವನೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳಿಗೆ ಇತ್ತೀಚೆಗೆ ದೇಶದಲ್ಲಿ ಹೃದ್ರೋಗಿಗಳ ಪ್ರಮಾಣ ಹೆಚ್ಚಾಗಿದೆ. ಅದರಲ್ಲಿಯೂ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಯುವ ಸಮುದಾಯವೇ ಹೃದ್ರೋಗಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕರೊನರಿ ಹಾರ್ಟ್ (ಹೃದಯ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆ)ಡಿಸೀಸ್ ಹೆಚ್ಚಾಗುತ್ತಿದೆ. ಹೃದಯದ ಒಂದು ಇಲ್ಲವೇ ಎರಡು ರಕ್ತನಾಳಗಳಲ್ಲಿ ಬ್ಲಾಕ್ ಇದ್ದರೆ ಅದನ್ನು ತೆರವುಗೊಳಿಸಲು ಸ್ಟಂಟ್ ಹಾಕಲಾಗುತ್ತದೆ. ಮೂರು ಪ್ರಮುಖ ರಕ್ತನಾಳಗಳಲ್ಲಿಯೂ ಬ್ಲಾಕೇಜ್ ಕಂಡುಬಂದರೆ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಕೆಲವು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಗುಣಪಡಿಸಲು ಸಾಧ್ಯವಾಗದ ಪ್ರಮಾಣದಲ್ಲಿ ರಕ್ತನಾಳಗಳು ಬಂದ್ ಆಗಿರುತ್ತವೆ. ಈ ವಿಧವಾದ ರಕ್ತನಾಳಗಳ ಬ್ಲಾಕೇಜ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಸಿಪಿ ಥೆರಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಮೈಸೂರಿನಲ್ಲಿ ಕೆಲವು ವರ್ಷಗಳಿಂದ ದಿ ರಿವೈವ್ ಆಸ್ಪತ್ರೆಯಲ್ಲಿ ಈ ವಿಶೇಷ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಸಾವಿರಾರು ಮಂದಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಹೆಚ್ಚಾಗಬೇಕಿದೆ ಎಂದರು.
ಏನಿದು ಇಸಿಪಿ ಥೆರಪಿ :
ಇಸಿಪಿ ಥೆರಪಿ ಎಂಬುದು ಹೃದಯದಯದಿಂದ ದೇಹದ ನಾನಾ ಭಾಗಗಳಿಗೆ ರಕ್ತ ಸಾಗಿಸುವ ಮೂರು ಪ್ರಮುಖ ನಾಳಗಳಲ್ಲಿ ಬ್ಲಾಕೇಜ್ ಕಂಡುಬಂದಾಗ ಅದಕ್ಕೆ ಹೊಂದಿಕೊಂಡಿರುವ ಉಪ ರಕ್ತನಾಳಗಳನ್ನು ತೆರೆಯುವಂತೆ ಮಾಡಿ ಅದರಲ್ಲಿ ರಕ್ತಚಲನೆಯಾಗುವಂತೆ ಮಾಡಿ ಹೃದಯ ಎಂದಿನಂತೆ ಕೆಲಸ ಮಾಡುವಂತೆ ಮಾಡಲು ನೀಡುವ ಚಿಕಿತ್ಸಾ ವಿಧಾನವಾಗಿದೆ. ಈ ಕುರಿತು 23, 000 ಅಧ್ಯಯನಗಳು ಹಾಗೂ 400 ಕ್ಕೂ ಹೆಚ್ಚು ಕ್ಲಿನಿಕಲ್ ರಿಸರ್ಚ್ ನಡೆದಿವೆ. ಇದು ಯಾವುದೇ ಗಾಯ ಹಾಗೂ ಶಸ್ತ್ರ ಚಿಕಿತ್ಸೆ ಇಲ್ಲದ ಅತ್ಯಂತ ಪರಿಣಾಮಕಾರಿಯಾದ ಯುಎಸ್ ಅಪ್ರೂವಲ್ವಿಧಾನವಾಗಿದೆ.
ಚಿಕಿತ್ಸೆ ಹೇಗೆ ?
ಚಿಕಿತ್ಸೆ ವೇಳೆ ಕೆಲವು ಒತ್ತಡದ ಪಟ್ಟಿಗಳನ್ನು ಕಾಲು, ತೊಡೆ ಹಾಗೂ ಸೊಂಟದ ಸುತ್ತಲೂ ಸುತ್ತಲಾಗುತ್ತದೆ. ಈ ಪಟ್ಟಿಯು ಹೃದಯದ ಬಡಿತಕ್ಕೆ ಅನುಗುಣವಾಗಿ ಬಿಗಿಯಾಗುವುದು ಮತ್ತು ಸಾಮಾನ್ಯ ಸ್ಥಿತಿಗೆ ಬರುವ ಪ್ರಕ್ರಿಯೆ ನಡೆಸುತ್ತದೆ. ಬಿಗಿಯಾದಾಗ ಕಾಲು, ತೊಡೆ ಹಾಗೂ ಸೊಂಟದ ಭಾಗದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ರಕ್ತವು ಸೊಂಟದ ಮೇಲ್ಭಾಗಕ್ಕೆ ವೇಗವಾಗಿ ಚಲಿಸುತ್ತದೆ. ಈ ಚಿಕಿತ್ಸೆಯನ್ನು ದಿನಕ್ಕೆ 1 ಗಂಟೆಯಂತೆ 30 ದಿನ ನೀಡಿದಲ್ಲಿ ಹೃದಯದಲ್ಲಿಯೂ ರಕ್ತದ ಚಲನೆ ಹೆಚ್ಚಾಗಿ ಪ್ರಮುಖ ಮೂರು ನಾಳಗಳೊಂದಿಗೆ ಇರುವ ರಕ್ತ ನಾಳಗಳು ಈ ನೈಸರ್ಗಿಕ ವಿಧಾನದ ಮೂಲಕ ತೆರೆದುಕೊಳ್ಳುತ್ತವೆ.
ಸಂಪರ್ಕ : ದಿ ರಿವೈವ್ ಆಸ್ಪತ್ರೆಯಲ್ಲಿರುವ ಮೈಸೂರು ಕಾರ್ಡಿಯಾಕ್ ಇಸಿಪಿ ಸೆಂಟರ್, ನಂ.9, ಹೆಬ್ಬಾಳ್ ಕೆರೆ ಬಳಿ, ಮೊ. 9353793597
ಯಾವ ಯಾವ ಕಾಯಿಲೆಗೆ ಪ್ರಯೋಜನಕಾರಿ :
ಹೃದಯ ರಕ್ತನಾಳ ಬ್ಲಾಕೇಜ್ (ಕೊರೊನರಿ ಡಿಸೀಸ್), ಕ್ರಾನಿಕ್ ಸ್ಟೇಬಲ್ ಆಂಜಿನಾ, ಕ್ರಾನಿಕ್ ಹಾರ್ಟ್ ಫೆಲ್ಯೂರ್, ಎರೆಕ್ಟೈಲ್ ಡೈಸ್ಕ್ಷನ್, ಕಾರ್ಡಿಯೋಮಿಯೊಪತಿ, ಪೆರಿರಿಯಲ್ ನ್ಯೂರೊಪತಿ, ಸ್ಟ್ರೋಕ್ ರಿಹ್ಯಾಬಿಲಿಟೇಷನ್, ಪಾರ್ಕಿನ್ಸನ್ ಕಾಯಿಲೆ, ಸ್ಮರಣ ದೋಶ, ಶ್ರವಣ ದೋಷ, ಪಾರ್ಶ್ವ ವಾಯು, ಡಯಾಬಿಟಿಕ್ ನ್ಯೂರೊಪತಿ, ತೂಕ ಕಡಿಮೆ ಮಾಡುವುದು, ಮರೆಗುಳಿತನ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಇಸಿಪಿ ಥೆರಪಿ ಪಡೆಯಬಹುದಾಗಿದೆ.
Key words: ECP-solution -cardiovascular -blockage -clearance.