ಮೈಸೂರು,ಏಪ್ರಿಲ್,2,2022(www.justkannada.in): ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೈಸೂರಿನ ಆರ್.ಗೇಟ್ ಬಳಿ ಗ್ಯಾಸ್ ಸಿಲಿಂಡರ್ ಜೊತೆಗೆ ಏಕಾಂಗಿ ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ವಾಟಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಜನರ ಪರಿಸ್ಥಿತಿ ಅಥ೯ವಾಗುತ್ತಿಲ್ಲ. ಪೆಟ್ರೋಲ್,ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದೆ. ಹೊಟೇಲ್ ಗಳಲ್ಲಿ ತಿಂಡಿ ಊಟದ ಬೆಲೆ ಏರಿಕೆ ಮಾಡಲಾಗಿತ್ತಿದೆ. ಇಂದು ಯುಗಾದಿ ಹಬ್ಬ ಆದರೆ ನನಗೆ ಜನರ ನೋವು ಕಾಳಜಿ ತುಂಬಾ ಮುಖ್ಯ. ಬೇವು ಬೆಲ್ಲ ಇದಕ್ಕೆ ಅರ್ಥವೇ ಇಲ್ಲ. ಜನರಿಗೆ ಬರಿ ಬೇವು ಸಿಗುತ್ತಿದೆ.
ಪ್ರಧಾನ ಮಂತ್ರಿಯವರದು ಬರಿ ಮಾತು. ಕೊರೋನದಿಂದ ಜನರು ಬೇಸತ್ತು ನೋವಿನಲ್ಲಿದ್ದಾರೆ. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಮತ್ತಷ್ಟು ಹೊರೆ. ಕೇಂದ್ರ ಸರ್ಕಾರ ಬಡವರ ಬೆನ್ನು ಮೂಳೆ ಮುರಿಯುತ್ತಿದ್ದಾರೆ. ಕನಾ೯ಟಕ ಎಲ್ಲಾ ರಾಜಕಾರಣಿಗಳು ಜನರ ನೋವನ್ನು ಕೇಳದೆ ಹಬ್ಬ ಮಾಡುತ್ತಾ ಮನೆಯಲ್ಲಿ ಕುಳಿತಿದ್ದಾರೆ. ಕೂಡಲೆ ಕೇಂದ್ರ ಸರ್ಕಾರ ಇಂದನ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
key words: Vatal Nagaraj- protests -against -petrol, diesel -gas price hike