ಮೈಸೂರು, ಏಪ್ರಿಲ್ 03, 2022 (www.justkannada.in): ಲಂಡನ್ ನ ಪ್ರತಿಷ್ಠಿತಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಎಫ್ ಆರ್ ಎಸ್ ಸಿ)ಗೆ ಭಾಜನರಾಗಿರುವ ಮೈಸೂರು ವಿವಿ ಪರಿಸರ ಅಧ್ಯಯನ ವಿಭಾಗ, ಅಧ್ಯಯನ ಮಂಡಳಿ ಅಧ್ಯಕ್ಷರು, ಎಂಟೆಕ್ ಇನ್ ಮೆಟಿರಿಯಲ್ಸ್ ಸೈನ್ಸ್ ವಿಭಾಗದ ಸಂಯೋಜಕರೂ ಆಗಿರುವ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏ.4ರಂದು ಆಯೋಜಿಸಲಾಗಿದೆ.
ಅಂದು ಸಂಜೆ 5 ಗಂಟೆಗೆ ವಿಜ್ಞಾನ ವಿಭಾನದಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ವಹಿಸಲಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಷರ್ ಎಮಿಟರಿಸ್ ಪ್ರೊ.ಕೆ.ಜೆ.ರಾವ್ ಅವರು ಅಭಿನಂದನಾ ನುಡಿಗಳನ್ನಾಡುವರು. ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಆರ್.ನಿರಂಜನ ಪಾಲ್ಗೊಳ್ಳುವರು.
ಮುಕ್ತಿ ವಿವಿ ವಿಶ್ರಾಂತ ಕುಲಪತಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಪ್ರೊ.ಎಸ್.ಎಸ್.ರಾಮೇಗೌಡ ಅವರು ಗೌರವಾಧ್ಯಕ್ಷತೆ ವಹಿಸುವರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.