ಬೆಂಗಳೂರು, ಏಪ್ರಿಲ್ 03, 2022 (www.justkannada.in): ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಮೇಲೆ ದಾಳಿಯಾಗಿದೆ.
ಪಾಕಿಸ್ತಾನದ ಆಡಳಿತಾರೂಢ ತೆಹ್ರಿಕ್-ಇ- ಇನ್ಸಾಫ್ ಪಕ್ಷದ ಕಾರ್ಯಕರ್ತರು ನವಾಜ್ ಶರೀಫ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪಾಕಿಸ್ತಾನದ ಪ್ಯಾಕ್ಟ್ ಫೋಕಸ್ ವರದಿಗಾರ ಅಹ್ಮದ್ ನೂರಾನಿ ಟ್ವೀಟ್ ಮಾಡಿದ್ದಾರೆ.
ದಾಳಿ ಮೇಳೆ ನವಾಜ್ ಶರೀಫ್ ಅವರ ಅಂಗರಕ್ಷಕ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ದದ ಅವಿಶ್ವಾಸ ನಿರ್ಣಯ ಮೇಲೆ ಇಂದು ಮತದಾನ ನಡೆಯುತ್ತಿರುವಂತೆಯೇ, ನವಾಜ್ ಶರೀಫ್ ಮೇಲೆ ಈ ದಾಳಿಯಾಗಿದೆ.
ಅವಿಶ್ವಾಸ ನಿರ್ಣಯ ಮೇಲೆ ಮತದಾನ ನಡೆದು ಯಶಸ್ವಿಯಾದರೆ, ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಪಕ್ಷದ ನವಾಜ್ ಶರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಪ್ರಧಾನಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಲಿದ್ದಾರೆ.