ಬೆಂಗಳೂರು, ಏಪ್ರಿಲ್ 03, 2022 (www.justkannada.in): ದಿಲ್ಲಿಯಲ್ಲಿ ನಡೆದ ಡಿಎಂಕೆ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಿವೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖರೆಲ್ಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಿಎಂಸಿ, ಟಿಡಿಪಿ, ಸಿಪಿಐ, ಬಿಜೆಪಿ ಮತ್ತು ಎಸ್ಎಡಿಯ ನಾಯಕರು ಕೂಡ ಡಿಎಂಕೆ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ಸೋನಿಯಾ ಗಾಂಧಿ ಅವರು ಜತೆಗೂಡಿ ಕಚೇರಿಯ ವಿಭಾಗದ ಕಚೇರಿಯನ್ನು ಅನಾವರಣಗೊಳಿಸಿದರು.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಟಿಡಿಪಿಯ ರಾಮಮೋಹನ್ ನಾಯ್ಡು ಹಾಗೂ ಕೆ ರವೀಂದ್ರ ಕುಮಾರ್, ಸಿಪಿಐನ ಡಿ ರಾಜಾ, ಬಿಜೆಡಿಯ ಅಮರ್ ಪಟ್ನಾಯಕ್ ಮತ್ತು ಎಸ್ಎಡಿಯ ಹರ್ಸಿಮ್ರತ್ ಬಾದಲ್ ಭಾಗವಹಿಸಿದ್ದರು.
ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್, ತಮಿಳುನಾಡು ಸರ್ಕಾರದ ಕೆಲವು ಸಚಿವರು, ಲೋಕಸಭೆ ಹಾಗೂ ರಾಜ್ಯಸಭೆಯ ಡಿಎಂಕೆ ಸಂಸದರು ಪಾಲ್ಗೊಂಡಿದ್ದರು.