ಮೈಸೂರು,ಏಪ್ರಿಲ್,4,2022(www.justkannada.in): ರಾಜ್ಯದಲ್ಲಿ ಭಾವನಾತ್ಮಕ ವಿಚಾರ ದೊಡ್ಡದು ಮಾಡಿ ರಕ್ತಪಾತ ಮಾಡಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಸಂದೇಶ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಭಾರತದಿಂದ ಇತರೆ ದೇಶಗಳಿಗೆ ಬಿಜೆಪಿಯ ಕೆಲ ಉದ್ಯಮಿಗಳಿಂದಲೇ ಹಾಲಾಲ್ ಮಾಂಸ ರವಾನೆಯಾಗುತ್ತಿದೆ. ಹಲಾಲ್ ಬಗ್ಗೆ ಮಾತನಾಡುವ ಶಾಸಕ ಸಿಟಿ ರವಿ ಈ ಬಗ್ಗೆ ಯಾಕೆ ಮಾತನಾಡುವುದಿಲ್ಲ. ದೇಶದಿಂದ ಹಲಾಲ್ ಮಾಂಸ ರವಾನೆಯಾಗುತ್ತಿದ್ದರೂ ಯಾಕೆ ಸುಮ್ಮನಿದ್ದಾರೆ. ಮೊದಲು ವಿದೇಶಗಳಿಗೆ ರವಾನೆಯಾಗುತ್ತಿರುವ ಹಲಾಲ್ ಮಾಂಸ ಬ್ಯಾನ್ ಮಾಡಿ. ಬಿಜೆಪಿಯಿಂದ ಒಬ್ಬರಿಗೊಂದು ಕಾನೂನು ಯಾಕೆ. ಇಲ್ಲಿ ವಿರೋಧಿಸುವುದು ಅಲ್ಲಿ ತಮ್ಮವರಿಂದಲೇ ಹಲಾಲ್ ಮಾಂಸ ರವಾನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ..? ಈ ಬಗ್ಗೆ ಸಿಟಿ ರವಿ ಯಾಕೆ ಪ್ರಶ್ನೆ ಮಾಡಿತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಅಮಿತ್ ಶಾ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಬಿಜೆಪಿ ಕಾರ್ಯಕರ್ತರಿಗೆ ಹಲವು ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಭಾವನಾತ್ಮಕ ವಿಚಾರ ದೊಡ್ಡದು ಮಾಡಿ ರಕ್ತಪಾತ ಮಾಡಿ. ಲಾಠಿಚಾರ್ಜ್ ಗೋಲಿಬಾರ್ ನಡೆಯಲಿ. ಚುನಾವಣೆ ಗೆಲ್ಲಬೇಕು ಅಧಿಕಾರದಲ್ಲಿ ಇರಬೇಕು ಎಂದು ಮುಖಂಡರಿಗೆ ಎ ಬಿ ಸಿ ಕ್ಯಾಟಗರಿ ಮಾಡಿದ್ದಾರೆ. ಭಾವನಾತ್ಮಕ ವಿಚಾರಗಳು ದೊಡ್ಡಮಟ್ಟದಲ್ಲಿ ಆಗಬೇಕು. ಇದೆಲ್ಲವನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿ ಈ ರೀತಿಯ ಸಂದೇಶವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ. ಅದಕ್ಕಾಗಿಯೇ ಅಮಿತ್ ಶಾ ಮಾಧ್ಯಮದವರನ್ನು ದೂರ ಇಟ್ಟು ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಶತಾಯಗತಾಯ ಮಾಡುತ್ತಾರೆ. ಜನ ಬಿಜೆಪಿ ಪ್ರಚೋದನೆಗೆ ಒಳಗಾಗಬೇಡಿ. ಅವರನ್ನು ನಂಬಿ ನಿಮ್ಮ ತಲೆ ಮೇಲೆ ನೀವೆ ಚಪ್ಪಡಿ ಎಳೆದುಕೊಳ್ಳಬೇಡಿ ಎಂದು ಹೇಳಿದರು.
Key words: mysore-kpcc-spoksperson-M.Lakshman-Amith sha