ಮಂಗಳೂರು,ಮೇ,12,2022(www.justkannada.in): ಕೇರಳದಲ್ಲಿ ‘ಮಕ್ಕಳಲ್ಲಿ ಟೊಮೆಟೊ ಜ್ವರ ಕಂಡು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಕೇರಳ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇರಳದಲ್ಲಿ ಟೊಮ್ಯಾಟೊ ಜ್ವರ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಲರ್ಟ್ ಆಗಿದ್ದು, ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಖಾಸಗಿ, ಸರ್ಕಾರಿ ಆಸ್ಪತ್ರಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಮಕ್ಕಳ ಮೇಲೆ ನಿಗಾ ಇಡಿ. ಕೇರಳಾದಿಂಧ ಬರುವ ಪ್ರಯಾಣೀಕರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮಂಗಳೂರು ಉಡುಪಿ ಕೊಡಗು ಚಾಮರಾಜನಗರ ಮೈಸೂರು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಟೊಮೆಟೋ ಜ್ವರ ಕಂಡು ಬಂದರೇ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಅಪರೂಪದ ವೈರಸ್ ಆಗಿರುವ ಟೊಮೆಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದಲ್ಲಿ ಕಂಡು ಬಂದಿವೆ. ಹೀಗಾಗಿ ನಮ್ಮ ‘ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡು ಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
Key words: Tomato- Fever –Kerala-Border
ENGLISH SUMMARY…
Tomato fever in Kerala: Red alert in border areas
Mangaluru, May 12, 2022 (www.justkannada.in): A red alert has been announced in the border areas of Karnataka and Kerala states, following reporting of cases of ‘Tomato Fever,’ among children in Kerala.
A red alert has been announced in Mangaluru, Udupi, Kodagu, and border areas of Chamarajanagara and Mysuru Districts. The Health Department has given instructions to the authorities concerned to keep a strict vigil on those who arrive from Kerala and also monitor the health condition of children in the area, especially of those who are admitted to private and government hospitals. Tomato fever is caused by a rare virus.
Keywords: Tomato Fever/ children/ Kerala/ border areas