ಮೈಸೂರು,ಮೇ,19,2022(www.justkannada.in): ಶಾಸಕ ಜಿ.ಟಿ ದೇವೇಗೌಡರ ಮೊಮ್ಮಗಳು ಗೌರಿ ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದ್ದು ರಾಜಕೀಯ ಗಣ್ಯರು ಶಾಸಕ ಜಿ.ಟಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಚಿವ ಎಸ್.ಟಿ ಸೋಮಶೇಖರ್ ಅವರು ಜಿ.ಟಿ ದೇವೇಗೌಡರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಮೊದಲ ಬಾರಿಗೆ ತಮ್ಮ ಮೊಮ್ಮಗಳ ಸಾವಿನ ಬಗ್ಗೆ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ನನ್ನ ಮೊಮ್ಮಗಳು ಪುಣ್ಯವಂತೆ. ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಬಂದ ರೀತಿಯಲ್ಲಿ ಗಣ್ಯರು, ಜನರು ಅವಳ ಸಾವಿನ ದಿನ ಬಂದರು. ನನ್ನ ಮೊಮ್ಮಗಳು ಬಹಳ ಚೂಟೀಯಾಗಿದ್ದಳು. ಅವಳಿಗೆ ಕ್ಯಾನ್ಸರ್ ಬಂದಿತ್ತು. ಆದರೇ ಏಳು ತಿಂಗಳಲ್ಲಿ ಅವಳು ಕ್ಯಾನ್ಸರ್ ಗೆದಿದ್ದಳು. ವೈದ್ಯರ ಕೂಡ ಕ್ಯಾನ್ಸರ್ ಮುಕ್ತ ಎಂದು ಹೇಳಿ ಸಂತೋಷ ಪಟಿದ್ದರು. ಆದರೆ ಅವಳಿಗೆ ದಿಢೀರನೇ ಆ ಲಕ್ಷಣಗಳು ಮತ್ತೆ ಕಾಣಿಸಿಕೊಂಡು ಸಾವು ಬಂತು ಎಂದು ತಮ್ಮ ನೋವು ಹಂಚಿಕೊಂಡರು.
ಗೌರಿ ಸಾವಿನ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಮುಖಂಡರು ಸಾಂತ್ವನ ಹೇಳಿದ್ದಾರೆ. ಯಾವ ಪಕ್ಷದವರ ಜೊತೆಗೂ ರಾಜಕಾರಣ ಮಾತನಾಡಿಲ್ಲ. ಕುಮಾರಸ್ವಾಮಿ ಅವರ ಜೊತೆ ಮಾತು ಬಿಟ್ಟು ಎರೆಡುವರೆ ವರ್ಷವಾಗಿತ್ತು.ಅವರು ಕೂಡ ಬಂದು ಸಾಂತ್ವಾನ ಹೇಳಿದ್ದಾರೆ. ನಿಖಿಲ್ ಕುಮಾರಸ್ಚಾಮಿ ನಮ್ಮ ಕುಟುಂಬದ ಸದಸ್ಯ ಇದ್ದಂತೆ. ನನ್ನ ಮಗ ಮತ್ತು ನಿಖಿಲ್ ಆತ್ಮೀಯ ಸ್ನೇಹಿತರು. ಹೀಗಾಗಿ ನಮ್ಮ ನೋವಿನ ಜೊತೆಗೆ ಅವರಿದ್ದಾರೆ. ರಾಜಕಾರಣ ವಿಚಾರ ಮುಂದೆ ಮಾತನಾಡುತ್ತೇನೆ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.
Key words: death – granddaughter-MLA-G.T. Deve Gowda.