ಮೈಸೂರು,ಮೇ,24,2022(www.justkannada.in): ಸಂಸ್ಕೃತಿಕ ನಗರಿ ಮೈಸೂರಿನ ಖಾಸಗಿ ಶಾಲೆ ದೇಶದಲ್ಲೇ ಮೊದಲ ಬಾರಿಗೆ ರೋಬೋಟ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ. ಈ ಮೂಲಕ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ.
ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಖಾಸಗಿ ಶಾಲೆ, ಮಕ್ಕಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಎಜುಕೇಷನ್ ರೋಬೋಟ್ ಮೊರೆ ಹೋಗಿದ್ದು, ಪೂರ್ವ ಪ್ರಾಥಮಿಕ ಶಿಕ್ಷಣದಿಂದ 9ನೇ ತರಗತಿವರೆಗೆ ರೋಬೋಟ್ ಭೋದನೆ ಮಾಡಲಿದೆ. ಜಪಾನ್ ನಿಂದ ಎರಡು ರೋಬೋಟ್ ತರಿಸಿಕೊಳ್ಳಲಾಗಿದ್ದು, ಒಂದೊಂದು ರೋಬೋಟ್ ಗೆ ತಲಾ ಎರಡು ಲಕ್ಷ ರೂಪಾಯಿ ಖರ್ಚಾಗಿದೆ.
ಈ ರೋಬೋಟ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಈ ಮೂಲಕ ಮೈಸೂರಿನ ಖಾಸಗಿ ಶಾಲೆ ದೇಶದಲ್ಲೇ ಮೊದಲ ರೋಬೋಟಿಕ್ ಲ್ಯಾಬ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರೋಬೋಟ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಖಾಸಗಿ ಶಾಲೆ ಮುಂದಾಗಿದೆ.
Key words: Robot education – first time – country- private school – Mysore