ಬೆಂಗಳೂರು, ಮೇ 27, 2022 (www.justkannada.in): ಶಿಕ್ಷಕರ ನೇಮಕಾತಿ ಸಿಇಟಿ ಪರೀಕ್ಷೆಗಳ ಕೀ ಉತ್ತರವನ್ನು ಶಿಕ್ಷಣ ಇಲಾಖೆ ಇರಡು ಮೂರು ದಿನಗಳಲ್ಲಿಬಿಡುಗಡೆ ಮಾಡಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿ ಸಲ್ಲಿಸಿದ್ದ 31,967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74,116 ಮಂದಿ. ಇದರಲ್ಲಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 69,159 ಅಭ್ಯರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಶಿಕ್ಷಣ ಇಲಾಖೆ ಇರಡು ಮೂರು ದಿನಗಳಲ್ಲಿ ಕೀ ಉತ್ತರವನ್ನು ಬಿಡುಗಡೆ ಮಾಡಲಿದ್ದು,. ಅಧಿಕೃತವಾಗಿ ಕೀ ಉತ್ತರಗಳು ಪ್ರಕಟವಾದ ನಂತರ ತಮ್ಮ ಓಎಂಆರ್ ಕಾಪಿಗಳನ್ನು ಪರಿಶೀಲಿಸಿಕೊಳ್ಳಬಹುದು.