ಕೊಪ್ಪಳ,ಮೇ,28,2022(www.justkannada.in): ಪಠ್ಯ ಪುಸ್ತಕ ಮತ್ತು ಹಿಜಾಬ್ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆರೋಪಿಸಿದರು.
ಕೊಪ್ಪಳದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ನಾಗೇಶ್, ಈಗಾಗಲೇ ಶಾಲಾ ಪಠ್ಯಪುಸ್ತಕ ಮುದ್ರಣಗೊಂಡಿದೆ. ಪಠ್ಯ ಪುಸ್ತಕದಲ್ಲಿ ಇತಿಹಾಸ ರಾಷ್ಟ್ರೀಯತೆ ಇದೆ. ಆದರೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಗೊಂದಲ ಮೂಡಿಸುತ್ತಿದೆ ಎಂದು ಕಿಡಿಕಾರಿದರು.
ಮಂಗಳೂರು ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ, ಬಿ.ಸಿ ನಾಗೇಶ್, ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಮವಸ್ತ್ರಕ್ಕೆ ಮಾತ್ರ ಅವಕಾಶವಿದೆ. ಈ ಬಗ್ಗೆ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದರು.
ಇದೇ ವೇಳೆ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಬಿ.ಸಿ ನಾಗೇಶ್, ಆರ್ ಎಸ್ ಎಸ್ ಇಟಾಲಿಯನ್ ಮೂಲವಲ್ಲ. ದೇಶದಲ್ಲಿ ಇಟಾಲಿಯನ್ ಮಾಡಲು ಹೋಗ್ತಿಲ್ಲ ಎಂದು ಕುಟುಕಿದರು.
Key words: Congress -confused -about text book –hijab-Minister-BC Nagesh.
ENGLISH SUMMARY…
Cong. is creating confusion about text books and Hijab: Education Minister B.C. Nagesh
Koppal, May 28, 2022 (www.justkannada.in): Primary and Secondary Education Minister B.C. Nagesh today alleged that the Congress is creating confusion among the people about text books and Hijab issue.
Speaking to the media persons in Koppal today, he informed that the school text books have already been printed. “There is history and nationality in the text books. But the Congress is making false allegations and creating confusion,” he alleged.
In his response to the Mangaluru Hijab row, the Minister said that everyone should follow Court orders. “Only school uniform is allowed in the schools. The Congress is unnecessarily creating confusion in this matter,” he said.
Keywords: Education Minister B.C. Nagesh/ Text book/ Hijab row/ confusion/ congress