ಮೈಸೂರು,ಮೇ,28,2022(www.justkannada.in): ಪಠ್ಯ ಪರಿಷ್ಕರಣೆ ಸಮಿತಿಯನ್ನ ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರೊ. ಭಗವಾನ್, ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ತಿಳುವಳಿಕೆ ಇಲ್ಲ. ಸರ್ಕಾರ ಕೂಡಲೇ ಪಠ್ಯ ಸಮಿತಿಯನ್ನು ನಿಷೇಧ ಮಾಡಬೇಕು. ಸಂವಿಧಾನದ ಯಾವುದೇ ಆಶಯಗಳನ್ನು ಬಳಸುತ್ತಿಲ್ಲ. ಅತ್ಯಂತ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಹಿಂದೂ ಎಂದರೇ ಹೀನಾನಾಗಿ ಇರುವನ್ನು ಹಿಂದೂ ಎಂದು ಉಲ್ಲೇಖ ಇದೆ. ಹಿಂದೂ ಧರ್ಮ ಅಂದರೆ ಬ್ರಾಹ್ಮಣ ಧರ್ಮ. ಇದು ಸಂಪೂರ್ಣ ಅಸಮಾನತೆಯ ವ್ಯವಸ್ಥೆ. ಇದೇ ಬಿಜೆಪಿಗರ ಗುರಿ ಎಂದು ಟೀಕಿಸಿದರು.
ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು. ಇದನ್ನು ನಾವು ಯಾರು ಒಪ್ಪುವುದಿಲ್ಲ. ಗುಲಾಮಗಿರಿಯನ್ನು ಪ್ರತಿಪಾದನೆ ಮಾಡುವುದೇ ಅವರ ಗುರಿ. ನಮ್ಮ ಜನರಿಗೆ ಮಾನ ಮರ್ಯಾದೆ ಇದ್ದೀಯಾ..? ಬಸವಣ್ಣನನ್ನು ಮರೆತಿರುವುದು ಕರ್ನಾಟಕದ ದುರ್ದೈವ. ಅಧಿಕಾರಕ್ಕಾಗಿ ಬಿಜೆಪಿಯ ನಾಯಕರು ಗುಲಾಮರಾಗಿದ್ದಾರೆ.
ರಾಮ ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ತಳ್ಳಿದ್ದಾನೆ. ರಾಮನಿಗೆ ಮಾನವೀಯತೆ ಇದ್ದೀಯಾ..? ರಾಮ ಮಹಿಳಾ ವರ್ಗದ ವಿರೋಧಿ. ಬ್ರಾಹ್ಮಣರು ಗುಲಾಮಾ ರಾಮನನ್ನು ದೇವರಾಗಿ ಮಾಡಿದ್ದಾರೆ. ಕೃಷ್ಣನೇ ಜಗತ್ತಿನಲ್ಲಿ ಪಾಪಿ. ಕೃಷ್ಣ ,ರಾಮ ನಮಗೆ ಬೇಕಿಲ್ಲ ಎಂದು ಪ್ರೋ ಭಗವಾನ್ ನುಡಿದರು.
Key words: Education – Minister – no understanding -Text Revision Committee -Bhagavan