UPSC : ಮೈಸೂರು ಮೂಲದ ವಿಶೇಷ ವಿದ್ಯಾರ್ಥಿನಿಯ MEGHAನ ಸಾಧನೆ.

UPSC-TOPPER-BLIND-STUDENT-MEGHANA-FROM-MYSORE-KARNATAKA

ಮೈಸೂರು, ಮೇ 30, 2022 ; ದೇಶದ ಅತ್ಯುನ್ನತ ನಾಗರೀಕ ಸೇವೆ (ಕೇಂದ್ರ ಲೋಕಸೇವಾ ಆಯೋಗ -UPSC) ನೇಮಕ ಸಂಬಂಧ ಈ ಸಾಲಿನ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ ಅವರು 425ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಪಿರಿಯಾಪಟ್ಟಣ ತಾಲೂಕು, ಕುಡುಕೂರಿನ (ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸ) ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ, 2020ನೇ ಸಾಲಿನಲ್ಲೂ 465ನೇ ರ್ಯಾಂಕ್ ಪಡೆದಿದ್ದರು.

ಮೇಘನಾ, 10ನೇ ತರಗತಿಯಲ್ಲಿದ್ದಾಗಲೇ ರೆಟಿನಾ ಸಮಸ್ಯೆಯಿಂದ ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ದೃತಿಕೆಡದೆ, ಈ ವೈಕಲ್ಯವನ್ನು ಮೆಟ್ಟಿನಿಂತು UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದಿದ್ದರು.

ಹಾಲಿ ಮೇಘನಾ ಅವರು, ಬೆಂಗಳೂರಿನ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಉತ್ತರಖಾಂಡ್ ಮೂಲದ ದೃಷ್ಟಿವಿಶೇಷಚೇತನೆ ವಿದ್ಯಾರ್ಥಿನಿ ಕಲ್ಪನಾ, SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಗಮನ ಸೆಳೆದಿದ್ದಳು. ಮನ್ ಕೀ ಬಾತ್ ಕಾರ್ಯಕ್ರಮಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಪ್ರಶಂಸಿದ್ದು, ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇದೀಗ ಮೈಸೂರು ಮೂಲದ ಮತ್ತೊರ್ವ ದೃಷ್ಟಿವಿಶೇಷಚೇತನೆ UPSC ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಿರುವುದು ಮೈಸೂರಿಗರಲ್ಲಿ ಹೆಮ್ಮೆ ಮೂಡಿಸಿದೆ.

Key words : UPSC-TOPPER-BLIND-STUDENT-MEGHANA-FROM-MYSORE-KARNATAKA