ಮೈಸೂರು,ಜೂನ್,2,2022(www.justkannada.in): ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್ ಭೈರಪ್ಪ ತಮ್ಮ ನಿಲುವು ತಿಳಿಸಿದ್ದು, ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ, ಇಂದಿರಾಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನ ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನ ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಅವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನ ಒಪ್ಪಿಕೊಂಡು ಅಳವಡಿಸಿಕೊಂಡರು ಎಂದು ಮಾಹಿತಿ ಬಿಚ್ಚಿಟ್ಟರು.
ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ನಾನು ಸಲಹೆ ಕೊಟ್ಟಿದ್ದೆ.
ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು ? ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು. ನಾನು ಲೇಖಕ, ಕಾರ್ಯಕರ್ತ ಅಲ್ಲ. ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ “ಪ್ರಶಸ್ತಿ ವಾಪ್ಸಿ” ಚಳವಳಿ ಶುರು ಮಾಡಿದರು. ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ನಾನು ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದರು.
ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ.
ಪ್ರಜಾಪ್ರಭುತ್ವಕ್ಕಾಗಿ ಎಲೆಕ್ಷನ್ ನಡೆಯಬೇಕು. ಆದರೆ ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲಾ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು. ನಾಟಕ ಇರೋದು ಚಳವಳಿ ಮಾಡೋಕೆ. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪ ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಅದು ಸಾಧ್ಯ ಆಗಲಿಲ್ಲ.
ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟು, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅಂತ ಪ್ರತಾಪ್ ಸಿಂಹ ಹೇಳಿದರು. “ಟಿಪ್ಪುವಿನ ನಿಜ ಸ್ವರೂಪ” ಪುಸ್ತಕವನ್ನು ಯಾರೂ ಓದುವುದಿಲ್ಲ. ಟಿಪ್ಪು ಹೆಸರು ಬದಲು ಅಬ್ದುಲ್ ಕಲಾಂ ಹೆಸರು ಇಟ್ಟರೆ ತಪ್ಪೇನು…? ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರಶ್ನಿಸಿದರು.
ಪ್ರತಾಪ್ ಗಢ್ ದ ಸ್ಟೋರಿ ಬಿಚ್ಚಿಟ್ಟು ಶಿವಾಜಿ ಕಾಲದ ಘಟನೆಯನ್ನು ವಿವರಿಸಿದ ಸಾಹಿತಿ ಎಸ್ ಎಲ್ ಭೈರಪ್ಪ, ಬಿಜಾಪುರ ಸುಲ್ತಾನರ ಸೇನಾಧಿಪತಿ ಅಫಜಲ್ ಖಾನ್ ಹಾಗೂ ಶಿವಾಜಿ ನಡುವಿನ ಘಟನೆ ಸ್ಮರಿಸಿದರು. ಸಂಧಾನದ ನೆಪದಲ್ಲಿ ಶಿವಾಜಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ವೇಳೆ ಬುದ್ದಿವಂತಿಕೆ ಪ್ರದರ್ಶಿಸಿದ ಶಿವಾಜಿ.ವ್ಯಾಘ್ರನ ಖಡ್ಗದಿಂದ ಅಫಜಲ್ ಖಾನ್ ಹತ್ಯೆ ಮಾಡಿದ್ದ.
ಅಲ್ಲಿನ ಗೈಡ್ ನನಗೆ ಈ ಮಾಹಿತಿ ಕೊಡಲಿಲ್ಲ. ನಾನು ಐದು ರೂಪಾಯಿ ಕೊಟ್ಟೆ ಆಮೇಲೆ ಅದನ್ನು ತೋರಿಸಿದ. ಆ ಜಾಗದಲ್ಲಿ ದೊಡ್ಡ ಬೋರ್ಡ್ ಇತ್ತು ಆದರೆ ಕೆಲ ಮುಸಲ್ಮಾನರ ಅಣತಿಯಂತೆ ತೆಗೆಸಲಾಯಿತು. ಅಲ್ಲಿ ದರ್ಗಾ ಕಟ್ಟಿಸಲು ಮನವಿ ಮಾಡಿದರು. ಅವರ ಮನವಿಯಂತೆ ಅಲ್ಲಿ ದರ್ಗಾ ಕಟ್ಟಲಾಗಿದೆ. ನಮ್ಮಲ್ಲಿ ಚುನಾವಣೆಗಾಗಿ ಏನು ಬೇಕಾದರು ಮಾಡುವ ಸ್ಥಿತಿ ತಲುಪಿದ್ದೇವೆ ಎಂಧು ಅಸಮಾಧಾನ ಹೊರ ಹಾಕಿದರು.
ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು.
ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮೇಲೆ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಎಲ್ ಭೈರಪ್ಪ, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸಚಿವ ನಾಗೇಶ್ ಮನೆ ಸುಟ್ಟು ಹಾಕಲು ಹೋಗಿದ್ದರು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ.? ಎಂದು ಕಿಡಿಕಾರಿದರು.
ಸಾಹಿತಿಗಳ ವಿರುದ್ಧ ಪರೋಕ್ಷ ಅಸಮಾಧಾನ.
ಮೂರನೇ ಮೈಸೂರು ಯುದ್ದದಲ್ಲಿ ಟಿಪ್ಪು ಸೋತ ಘಟನೆ ವಿವರಿಸಿದ ಎಸ್.ಎಲ್ ಭೈರಪ್ಪ, ಬ್ರಿಟಿಷರು ನಷ್ಟವನ್ನು ಕಟ್ಟಿಕೊಡುವಂತೆ ಟಿಪ್ಪುಗೆ ಹೇಳಿದ್ದರು. ಹಣ ಇಲ್ಲದ ಕಾರಣಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ. ಟಿಪ್ಪು ಅಫ್ಘಾನಿಸ್ಥಾನದ ಸುಲ್ತಾನನಿಗೆ ಪತ್ರ ಬರೆದಿದ್ದನು. ಭಾರತವನ್ನು ಇಸ್ಲಾಂ ದೇಶ ಮಾಡೋಣ ಅಂತಾ ಪತ್ರ ಬರೆದಿದ್ದನು. ಆದರೆ ಯಾರು ಏಕೆ ಇದನ್ನು ಹೇಳುವುದಿಲ್ಲ. ನಮ್ಮ ರಾಷ್ಟ್ರ ಏಕೆ ಈ ರೀತಿ ಆಗುತ್ತಿದೆ ನನಗೆ ಅರ್ಥವಾಗುತ್ತಿಲ್ಲ. ನೆಹರು ಔರಂಗಜೇಬ್ ಬಗ್ಗೆ ಬರೆಯುತ್ತಾರೆ. ಆತ ಐಡಿಯಲ್ ಮನುಷ್ಯ ಅಂತಾ. ಆತನಿಗೆ ಅತಿರೇಕವಿತ್ತು ಅಂತಾ ಬರೆಯುತ್ತಾರೆ. ಆದರೆ ಏನು ಅತಿರೇಕ ಅಂತಾ ಹೇಳುವುದಿಲ್ಲ. ಆತ ಒಡೆದ ದೇವಸ್ಥಾನದ ಬಗ್ಗೆ ಮಾತನಾಡಿದರೆ ಕೋಮುವಾದಿ ಅನ್ನುತ್ತಾರೆ. ಪಠ್ಯದಲ್ಲಿ ಸತ್ಯವನ್ನು ಹೇಳಲು ಆಗುತ್ತಿಲ್ಲ. ಬದಲಾವಣೆ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಸರ್ಕಾರದ ಮೇಲೆ ಒತ್ತಡ ಇದ್ದೇ ಇರುತ್ತಾರೆ ಎಂದು ಸಾಹಿತಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
Key words: Text book-revision – writer-SL Bhairappa-mysore
ENGLISH SUMMARY…
Textbooks were revised even during Indira Gandhi’s time: I was removed from the committee as I demanded to reveal the truth – S.L. Byrappa
Mysuru, June 2, 2022 (www.justkannada.in): Renowned litterateur S.L. Byrappa, in his reaction to the ongoing textbook curriculum revision row has expressed his view that textbooks should have only the truth and not anyone’s ideologies.
Addressing a press meet in Mysuru today, S.L. Byarappa informed that textbooks were revised even during the time of former Prime Minister Indira Gandhi. “I was kept out of the revision committee as I demanded that the textbooks should contain the truth. Then also they had prepared the curriculum by having the members in the committee as they wished. Almost all the Congress state governments agreed and adopted it,” he explained.
“Textbooks have only the truth, not anyone’s ideologies. I am a writer, not an activist. Textbook curriculum revision was proposed even during Vajpayee’s time. But the litterateurs across the country started an ‘Award Return’ movement. I had suggested they return the cash prize amount also along with the award. Within 15 days they became silent,” he revealed.
Dissatisfaction against litterateurs
Explaining an incident of Tipu Sultan’s failure during the third Mysuru war, S.L. Byarappa informed that the British had asked Tipu to fulfill the loss. But, as Tipu didn’t have money, he pledged his children. “Tipu had written a letter to the Afghanistan sultan, “let us convert India into an Islam country. Why such things are not told in the textbooks? I wonder why our nation is becoming like this? In his book, Nehru describes Aurangzeb as a person with ideologies. He also mentioned that Aurangzeb had an abnormality but doesn’t describe what kind of abnormality. If we speak about the temples destroyed by Aurangzeb, they will label us as communal. It is not possible in our country to mention the truth in textbooks. If anyone attempts to change it, they will create havoc,” he said.
Keywords: Litterateur S.L. Byrappa/ text book revision/ Indira Gandhi