ಮೈಸೂರು, ಜೂನ್ 05, 2020 (www.justkannada.in): ನಮ್ಮಲ್ಲಿ ಸದ್ಯ 3 ಮಿಲಿಯನ್ ಕಾಡು ಇದೆ. ಆದರ 17 ಮಿಲಿಯನ್ ಅರಣ್ಯ ಪ್ರದೇಶ ವ್ಯಾಜ್ಯ, ಒತ್ತುವರಿಯಲ್ಲಿ ಸಿಲುಕಿಕೊಂಡಿದೆ. ಅದು ಅರಣ್ಯ ಇಲಾಖೆಗೆ ಬಂದರೆ ಸಂರಕ್ಷಣೆ ಅನುಕೂಲವಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.
ಮಾನಸ ಗಂಗೋತ್ರಿ ಪರಿಸರ ವಿಜ್ಞಾನ ವಿಭಾಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ಸಂರಕ್ಷಣೆ ಪುಸ್ತಕದಲ್ಲಿ ಇರುವುದಿಲ್ಲ. ಬರಿ ಮಾತಿನಲ್ಲಿ ಯಾವುದೇ ಅರಣ್ಯ ರಕ್ಷಣೆ ಆಗುವುದಿಲ್ಲ. ಮನೆಯಲ್ಲಿ ಕೂತರೆ ಯಾವುದೇ ಕೆಲಸ ಆಗುವುದಿಲ್ಲ. ಕ್ಷೇತ್ರ ಭೇಟಿ ಮಾಡಬೇಕು. ಸಾಕಷ್ಟು ಅಧ್ಯಯನ ನಡೆಸಬೇಕು. ಆಗ ಮಾತ್ರ ಅರಣ್ಯ ಸಂರಕ್ಷಣೆ ಮಾಡಬಹುದು. ಮೈಸೂರು ಮೃಗಾಲಯ ಸರಕಾರದ ಅನುದಾನದಿಂದ ನಡೆಯುತ್ತಿಲ್ಲ. ಝೂಗೆ ಭೇಟಿ ನೀಡುವ ಜನರಿಂದ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಒಂದಷ್ಟು ಸಮಸ್ಯೆ ಆಯಿತು. ಆದರೆ, ಸಾಕಷ್ಟು ದಾನಿಗಳು ನೆರವಿಗೆ ಮುಂದೆ ಬಂದರು ಎಂದರು.
ಪರಿಸರ ಎಂದರೆ ಬರೀ ಕಾಡಲ್ಲ. ನಮ್ಮ ಸುತ್ತಮುತ್ತ ಇರುವ ಪ್ರದೇಶವೇ ಪರಿಸರ. ಈ ಪರಿಸರವನ್ನು ಸಂರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬರ ಹೊಣೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಭೂಮಿಗೆ ಚಿನ್ನಕ್ಕಿಂತ ಬೆಲೆ ಹೆಚ್ಚಿದೆ. ಇದನ್ನು ಕಳೆದುಕೊಳ್ಳಬಾರದು. ಮನುಷ್ಯ ಬದುಕಲು ಇರುವುದೊಂದೆ ಭೂಮಿ. ಇಂತಹ ಧರಣಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಹಲವು ಮಾಲಿನ್ಯಗಳಿಂದ ಪರಿಸರ ನಲುಗಿ ಹೋಗುತ್ತಿದೆ. ಇದನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಹಸಿ ಕಸ ಹಾಗೂ ಒಣ ಕಸವೆಂದು ಬೇರ್ಪಡಿಸುವ ಕಾರ್ಯ ಮೊದಲು ಮನೆಯಿಂದಲೇ ಆಗಬೇಕು. ಪ್ರವಾಸಕ್ಕೆ ಹೋದರೆ ಅಥವಾ ಕಾಡು, ನದಿ ಹತ್ತಿರ ಹೋದಾಗ ಪ್ಲಾಸ್ಟಿಕ್ ಸೇರಿದಂತೆ ಇತರರ ತ್ಯಾಜ್ಯಗಳನ್ನು ಎಸೆಯಬಾರದು. ಪ್ರಕೃತಿಯ ಒಂದು ಭಾಗ ಮನುಷ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ, ಕಳಕಳಿ ಇರಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಹೇಳಿಕೊಡಬೇಕು ಎಂದು ಹೇಳಿದರು.
ಡಾ.ಜಿ.ವಿ.ವೆಂಕಟರಾಮಣ, ಡಾ.ಎಸ್.ಶ್ರೀಕಂಠಸ್ವಾಮಿ, ಡಾ.ಎನ್.ಎಸ್.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ENGLISH SUMMARY…
“Just words won’t protect forest”: B.P.Ravi
Mysuru, June 5, 2022 (www.justkannada.in): “Only 3 million forest area is remaining. Whereas, 17 million forest area is facing litigation and encroachments. It will be good if all this land returns to the forest department,” observed Zoo Authority member secretary B.P.Ravi.
He participated in the Environment Day celebrations organized by the Environment Department in the Manasa Gangotri campus today, on the occasion of ‘World Environment day.’ “Forest conservation doesn’t exist in books. Just words won’t help in protection of forests. Nothing will happen if you sit at home. You should make field visits and do lot of studies in order to conserve forest area. The Chamarajendra Zoo in Mysuru is not functioning from government aid. It is running from the fee paid by the visitors to the zoo. We faced lot of problem during the COVID pandemic time. However, so many donors stepped forward and helped the animals,” he explained.
“Environment means not just forest. It includes our surroundings. It is the duty of all of us to conserve environment. Everyone should reduce plastic consumption and stop throwing garbage everywhere,” he added.
In his address, Prof. G. Hemanth Kumar, Vice-Chancellor, University of Mysore said, “the price of land is more than gold today. We shouldn’t lose it. There is only one earth for human beings to live. It is the responsibility of all of us to protect it, save it and pass it on to our future generations.”
Dr. G.V. Venkataramana, Dr. S.Srikantaswamy, Dr. N.S.Raju and others were present.
Keywords: University of Mysore/ World Environment day/ forest conservation