ಲಕ್ನೊ,ಜೂನ್,6,2022(www.justkannada.in): 2006ರಲ್ಲಿ ವಾರಣಾಸಿಯಲ್ಲಿ ಸಂಭವಿಸಿದ್ಧ ಅವಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಾಲಿವುಲ್ಲಾಗೆ ಗಾಜಿಯಾಬಾದ್ ಸೆಷನ್ಸ್ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2006 ಮಾರ್ಚ್ 7ರಂದು ವಾರಾಣಸಿಯ ದೇವಸ್ಥಾನ ಹಾಗೂ ರೈಲ್ವೆ ನಿಲ್ದಾಣದಲ್ಲಿ ಉಗ್ರ ವಾಲಿವುಲ್ಲಾ ಬಾಂಬ್ ಸ್ಫೋಟ ನಡೆಸಿದ್ದ. ಮಾರ್ಚ್ 7ರಂದು, ಮೊದಲ ಸ್ಫೋಟವು ಲಂಕಾ ಪೊಲೀಸ್ ಠಾಣೆಯ ಸಂಕಟ್ ಮೋಚನ್ ದೇವಾಲಯದ ಒಳಗೆ ಸಂಜೆ 6.15 ಕ್ಕೆ ಸಂಭವಿಸಿತು. ಸ್ಪೋಟದಲ್ಲಿ 7 ಜನರು ಸಾವನ್ನಪ್ಪಿದ್ದರು.
ಸ್ವಲ್ಪ ಸಮಯದ ನಂತರ ವಾರಣಾಸಿ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರಥಮ ದರ್ಜೆ ನಿವೃತ್ತಿ ಕೊಠಡಿಯ ಹೊರಗೆ ಬಾಂಬ್ ಸ್ಫೋಟಿಸಿತು. ಈ ಘಟನೆಯಲ್ಲಿ 18 ಜನರು ಸಾವನ್ನಪ್ಪಿದ್ದರು ಎನ್ನಲಾಗಿದೆ. ಇದೀಗ 16 ವರ್ಷಗಳ ಬಳಿಕ ಪ್ರಕರಣದ ಅಪರಾಧಿ ವಾಲಿವುಲ್ಲಾಗೆ ಉತ್ತರ ಪ್ರದೇಶ ಗಾಜಿಯಾಬಾದ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
Key words:Varanasi- bomb -blasts –case- sentenced – guilty- Death penalty