ಬೆಂಗಳೂರು,ಜೂನ್,14,2022(www.justkannada.in): ಶಂಕರಪುರಂನಲ್ಲಿ ದಕ್ಷಿಣಾಮ್ಮಾಯ ಶ್ರೀ ಶಾರದಾ ಶೃಂಗೇರಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಸ್ವಾಮೀಜಿ ಅವರ ಸನ್ನಿಧಾನದಲ್ಲಿ ಅರಣ್ಯ ಅಭಿವೃದ್ದಿ ನಿಗಮದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಟಿ, ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರ ಆನೂರಾಧ ಅವರು ಮತ್ತು ನಿರ್ದೇಶಕಿ ಭಾಗ್ಯವತಿ ಅಮರೇಶ್ ಶ್ರೀಗಂಧದ ಸಸಿಗಳನ್ನು ಸ್ವಾಮೀಜಿಗಳ ಸನ್ನಿಧಾನಕ್ಕೆ ಸರ್ಮಪಣೆ ಮಾಡಿದರು.
ಅಧ್ಯಕ್ಷೆ ತಾರಾ ಆನೂರಾಧ ಮಾತನಾಡಿ, ಬೆಂಗಳೂರುನಗರದಲ್ಲಿ 50ದಿನಗಳ ಕಾಲ ದಕ್ಷಿಣಾಮ್ಮಾಯ ಶೃಂಗೇರಿ ಶ್ರೀ ಶಾರದ ಪೀಠದ ಶ್ರೀ ಶ್ರೀ ವಿಧುಶೇಖರ ಮಹಾಸ್ವಾಮಿಗಳು ದಿವ್ಯಸಾನಿಧ್ಯ, ಆಶೀರ್ವಾದ ಲಭಿಸಿರುವುದು ಪುಣ್ಯದಫಲ. ಅರಣ್ಯ ಉಳಿಸಬೇಕು ಮತ್ತು ಪರಿಸರ ಉಳಿಯಬೇಕು .ಅದರಿಂದ ಅರಣ್ಯ ಅಭಿವೃದ್ದಿ ನಿಗಮ ರಾಜ್ಯ ಸರ್ಕಾರದ ಸಹಕಾರದಿಂದ ಅರಣ್ಯ ಅಭಿವೃದ್ದಿಗೆ ಶ್ರಮಿಸುತ್ತಿದೆ. ಶ್ರೀ ಗಂಧ ಗಿಡ ಬೆಳಸಲು ಕರ್ನಾಟಕದಲ್ಲಿ ಮುಕ್ತವಾಗಿ ಬೆಳಸಲು ಅವಕಾಶ ನೀಡಲಾಗಿದೆ. ಶೃಂಗೇರಿ ಮಠದ ಶ್ರೀ ಗಂಧ ಸಸಿಗಳನ್ನು ಶ್ರೀ ಶಾರದಾಂಬೆಯ ಆಶೀರ್ವಾದದಿಂದ ಸಮೃದ್ದವಾಗಿ ಬೆಳಯಲಿ ಮತ್ತು 15 ವರ್ಷಗಳ ಕಳೆದ ನಂತರ ಶ್ರೀಗಂಧ ಮಠದ ಉಪಯೋಗಕ್ಕೆ ಮತ್ತು ಪರಿಸರ ಉಳಿವಿಗೆ ಸಂದೇಶ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಮಾತನಾಡಿ, ಕರ್ನಾಟಕ ರಾಜ್ಯ ಅಭಿವೃದ್ದಿಗೆ ಮಹಾನ್ ಸಾಧು, ಸಂತರು ಮತ್ತು ಸ್ವಾಮೀಜಿಗಳ ಕೊಡುಗೆ. ಅನ್ನ,ಅಕ್ಷರ,ಆಶ್ರಯ ಮತ್ತು ಪರಿಸರ ,ಆರೋಗ್ಯದ ಬಗ್ಗೆ ಶೃಂಗೇರಿ ಮಠ,ಸಿದ್ದಗಂಗಾ ಮಠ, ಅದಿ ಚುಂಚನಗಿರಿ ಮಠ, ನಾಡಿನ ಹಲವಾರು ಮಠಗಳ ಕೊಡುಗೆಯಿಂದ ಇಂದು ನಮ್ಮ ರಾಜ್ಯ ವಿದ್ಯಾವಂತ, ಬುದ್ದಿವಂತರ ನಾಡು ಎಂಬ ಖ್ಯಾತಿ ಗಳಿಸಿದೆ. ಶ್ರೀ ವಿಧುಶೇಖರ ಮಹಾಸ್ವಾಮೀಜಿ ರವರ ಆಶೀರ್ವಾದ ಫಲದಿಂದ ನಾಡಿನ ಜನರಿಗೆ ಜನರಿಗೆ ಸುಖ,ಶಾಂತಿ, ನೆಮ್ಮದ್ದಿ ಸಿಗಲಿ ಎಂಬುದು ಪ್ರಾರ್ಥನೆ ಎಂದರು.
Key words: Forest Development-Corporation-Sandalwood-tree-Sringeri Math-actor-tara anuradha