ಶಿವಮೊಗ್ಗ,ಜೂನ್,15,2022(www.justkannada.in): ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಕುವೆಂಪು ಬರೆದ ನಾಡಗೀತೆಯನ್ನು ತಿರುಚಿದ್ದಾರೆ. ನಾಡಗೀತೆ ತಿರುಚಿದವರ ಮೇಲೆ ಒಂದೇ ಒಂದು ಕೇಸ್ ಬುಕ್ ಮಾಡಿಲ್ಲ. ಅವರಿಂದ ನಾವು ರಾಷ್ಟ್ರೀಯತೆ ಪಾಠ ಕಲಿಯಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟಾಂಗ್ ನೀಡಿದರು.
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಮತಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡಿಕೊಂಡು ಬಂದಿದೆ. ‘ರಾಮಾಯಣ ದರ್ಶನಂ’ ಪಾಠ ತೆಗೆದಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮೈಸೂರು ಮಹಾರಾಜರ ಪೂರ್ಣ ಪಾಠವನ್ನು ತೆಗೆದು ಹಾಕಿದೆ. ನಾಡಪ್ರಭು ಕೆಂಪೇಗೌಡರ ಪಾಠ ಕೈಬಿಟ್ಟಿತ್ತು ಎಂದು ಕಿಡಿಕಾರಿದರು.
ನಾವು ಯಾವುದೇ ಮಹನೀಯರ ಪಠ್ಯ ಕೈಬಿಟ್ಟಿಲ್ಲ. ಬಸವಣ್ಣರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ, ನಾವಲ್ಲ. ಇವರಿಗೆ ಏನು ಸಿಗದೇ ಇದ್ದಾಗ ಕೇಸರಿ ಚಡ್ಡಿ ಬಗ್ಗೆ ಮಾತಾಡ್ತಾರೆ. ವೈಚಾರಿಕ ಆಂದೋಲನ ಮಾಡಲು ಅವರ ಬಳಿ ಏನು ಇಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸದೇ ಈ ರೀತಿ ಮಾಡ್ತಿದ್ದಾರೆ ಎಂದು ಸಚಿವ ಬಿ.ಸಿ ನಾಗೇಶ್ ಕಿಡಿಕಾರಿದರು.
Key words: Congress-insulted –Kuvempu-Minister -BC Nagesh.