ಮೈಸೂರು,ಜೂನ್,16,2022(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜೂನ್ 13 ರಂದು ನಡೆದ ವಿಧಾನಪರಿಷತ್ ನಾಲ್ಕು ಸ್ಥಾನಗಳ ಚುನಾವಣೆ ಮತ ಏಣಿಕೆ ಕಾರ್ಯ ನಿನ್ನೆ ಆರಂಭಗೊಂಡಿತ್ತು. ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಇಂದು ಮುಗಿದು ಅಂತಿಮ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ವಿರುದ್ಧ ಮಧು ಜಿ. ಮಾದೇಗೌಡ ಅವರು 12,205 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ
ಮಧು ಜಿ. ಮಾದೇಗೌಡ ಅವರು ಒಟ್ಟು 45275 ಪಡೆದಿದ್ದಾರೆ. ಗೆಲುವಿಗೆ ನಿಗದಿಯಾದ 46083 ಮತಗಳ ಕೋಟವನ್ನ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಪಡೆಯಲಾಯಿತು. ಆ ಮೂಲಕ ಮಧು ಜಿ. ಮಾದೇಗೌಡ ಅವರು ನಿಗದಿತ ಕೋಟಾ ತಲುಪಿ ಜಯಭೇರಿ ಬಾರಿಸಿದರು.
ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರು 33878 ಮತ ಪಡೆದರು. ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19630 ಮತ ಪಡೆದು ಹೀನಾಯ ಸೋಲನುಭವಿಸಿದರು.
ಸೋಲು ಖಚಿತವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಮೈ. ವಿ ರವಿಶಂಕರ್ ಮತ ಎಣಿಕಾ ಕೇಂದ್ರದಿಂದ ಹೊರ ನಡೆದರು. ತಮ್ಮ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೈ. ವಿ ರವಿಶಂಕರ್, ನನ್ನ ಸೋಲಿನ ಹೊಣೆ ನಾನೇ ಹೊರುತ್ತೇನೆ. ಜೆಡಿಎಸ್ ನ ಮತಗಳು ಕಾಂಗ್ರೆಸ್ ಗೆ ಹೋದ ಕಾರಣ ನಾನು ಸೋಲಬೇಕಾಗಿ ಬಂತು. ಯಾಕೆ ನಮಗೆ ನಿರೀಕ್ಷೆ ಮಟ್ಟದ ಮತಗಳು ಬರಲಿಲ್ಲ ಎಂಬುದು ಗೊತ್ತಿಲ್ಲ. ಎಲ್ಲೊ ಒಂದು ಕಡೆ ಮತದಾರ ನನ್ನ ಮೇಲೆ ವಿಶ್ವಾಸ ಇಟ್ಟಿರಲಿಲ್ಲವೇನು. ಸೋಲೀಗ ಕಾರಣ ಏನು ಎಂಬುದು ತಿಳಿಯಬೇಕಿದೆ. ಮರಿತಿಬ್ಬೆಗೌಡ ನೇರವಾಗಿ ಕಾಂಗ್ರೆಸ್ ಬೆಂಬಲಿದ್ದು ಕಾಂಗ್ರೆಸ್ ಗೆ ಹೆಚ್ಚಿನ ಮತ ಬರಲು ಕಾರಣ ಇರಬಹುದು. ಬೆಂಬಲಿಸಿದ ಮತದಾರರು, ಕಾರ್ಯಕರ್ತರು , ನಾಯಕರಿಗೆ ಧನ್ಯವಾದ ಎಂದ ಮೈ.ವಿ ರವಿಶಂಕರ್ ತಿಳಿಸಿದರು.
Key words: Southern-Graduate-Election-congress-candidate-Madhu G. Madhegowda-win
ENGLISH SUMMARY…
South Graduates’ Constituency election: Huge victory for Madhu G. Madegowda
Mysuru, June 16, 2022 (www.justkannada.in): The results of the South Graduates’ Constituency elections has been announced today. Congress candidate Madhu G. Madegowda has registered a big victory.
The counting of votes ended today. Congress candidate Madhu G. Madegowda has won with a big margin of 12,205 votes against BJP candidate M.V. Ravishankar. JDS Candidate H.K. Ramu suffered a humiliating loss with just 19,630 votes.
Keywords: Congress candidate/ South Graduates’ constituency/ election result/ Madhu G. Madegowda/ victory