ಔರಂಗಾಬಾದ್, ಜೂನ್ 17, 2022: ಕೃಷಿ ನಡೆಸುವುದು ಕೈಗೆಟಕುತ್ತಿಲ್ಲ ಎಂಬ ಕಾರಣ ನೀಡಿ, ಮಹಾರಾಷ್ಟ್ರದ ಹಿಂಗೋಲಿಯ 22 ವರ್ಷ ವಯಸ್ಸಿನ ರೈತನೊಬ್ಬ ಹೆಲಿಕಾಪ್ಟರ್ ಕೊಳ್ಳಲು ರೂ. ಆರು ಕೋಟಿ ಸಾಲ ಕೋರಿ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿರುವ ಪ್ರಸಂಗ ವರದಿಯಾಗಿದೆ.
ಔರಂಗಾಬಾದ್ ಜಿಲ್ಲೆಯ ತಕೋಡಾ ಗ್ರಾಮದ ನಿವಾಶಿ ಕೈಲಾಸ್ ಪತಂಗೆ ಎಂಬ ರೈತ ಗುರುವಾರದಂದು ಸಾಲದ ಅರ್ಜಿಯೊಂದಿಗೆ ಗೋರೆಗಾಂವ್ ನ ಬ್ಯಾಂಕ್ ನಲ್ಲಿ ಹಾಜರಾಗಿದ್ದ.
ಪತಂಗೆ ಎರಡು ಎಕರೆ ಜಮೀನಿನ ಒಡೆಯನಾಗಿದ್ದು, ಅಸಮರ್ಪಕ ಮಳೆ ಹಾಗೂ ಆಗಾಗ ಉದ್ಭವಿಸುವ ಬರ ಪರಿಸ್ಥಿತಿಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಕೃಷಿ ನಡೆಸುವುದು ಬಹಳ ದುಸ್ತರವಾಗಿದೆ. “ಕಳೆದ ಎರಡು ವರ್ಷಗಳಲ್ಲಿ ನಾನು ನನ್ನ ಜಮೀನಿನಲ್ಲಿ ಸೋಯಾಬೀನ್ ಸಾಗುವಳಿ ನಡೆಸಿದೆ. ಆದರೆ ಅಸಮರ್ಪಕ ಮಳೆಯಿಂದಾಗಿ ನನಗೆ ಉತ್ತಮ ಲಾಭ ದೊರೆಯಲಿಲ್ಲ. ಮೇಲಾಗಿ ಬೆಳೆ ವಿಮೆಯ ಮೊತ್ತವೂ ಸಾಕಾಗುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ, ಪತಂಗೆ ಉತ್ತಮ ಜೀವನ ನಡೆಸಲು ಹೆಲಿಕಾಪ್ಟರ್ ಖರೀದಿಸಿ ಅದನ್ನು ಬಾಡಿಗೆಗೆ ಬಿಡಲು ಆಲೋಚಿಸಿದ್ದಾರಂತೆ.
ಕೇವಲ ಶ್ರೀಮಂತರು ಮಾತ್ರವೇ ದೊಡ್ಡ ಕನಸುಗಳನ್ನು ಕಾಣಬೇಕೇ? ರೈತರೂ ಸಹ ದೊಡ್ಡ ಕನಸುಗಳನ್ನು ಕಾಣಬಹುದು. ಅದಕ್ಕಾಗಿ ನಾನು ಹೆಲಿಕಾಪ್ಟರ್ ಖರೀದಿಸಲು ರೂ.೬.೬೫ ಕೋಟಿ ಸಾಲ ಕೇಳಿ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದೇನೆ. ಇತರೆ ವ್ಯಾಪಾರಗಳಲ್ಲಿ ತುಂಬಾ ಸ್ಪರ್ಧೆಯಿದೆ, ಆದ್ದರಿಂದ ನಾನು ಈ ಉಪಾಯವನ್ನು ಆಯ್ದುಕೊಂಡಿದ್ದೇನೆ, ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
key words: farmer – applied – bank