ಮೈಸೂರು,ಆ,9,2019(www.justkannada.in) ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಈ ನಡುವೆ ನೆರೆ ಸಂತ್ರಸ್ಥರಿಗೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ನೆರವಿನ ಹಸ್ತ ಚಾಚಿದ್ದಾರೆ.
ಶಾಸಕ ಎಸ್.ಎ ರಾಮದಾಸ್ ಅವರು ನೆರೆಸಂತ್ರಸ್ಥರಿಗಾಗಿ 5 ಲಕ್ಷ ರೂ ನೆರವು ನೀಡಿದ್ದಾರೆ. ನೆರೆ ಸಂತ್ರಸ್ಥರಿಗೆ ಸಹಾಯ ಮಾಡುವ ಕುರಿತು ಮಾತನಾಡಿರುವ ಶಾಸಕ ಎಸ್,ಎ ರಾಮದಾಸ್, ಮೈಸೂರಿನ ಎನ್. ಜಿ.ಓಗಳ ಮೂಲಕ ಅಗತ್ಯ ಸಲಕರಣೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಮಂಡ್ಯ, ಚಾಮರಾಜನಗರ ಮಡಿಕೇರಿ ಮೈಸೂರು ಜಿಲ್ಲೆಗಳಿಗೆ ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾವುದೇ ರಾಜಕೀಯ ಸೋಂಕಿಲ್ಲದೆ ಸಹಾಯ ಮಾಡಬೇಕು ಎಂದಿದ್ದೇವೆ ಎಂದರು.
ಹಾಗೆಯೇ 160 ಮನೆಗಳು ಜಿಲ್ಲೆಯಲ್ಲಿ ಹಾಳಾಗಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದೇವೆ. ಮೈಸೂರು ಜಿಲ್ಲೆಯಲ್ಲಿ ಹಣದ ಸಮಸ್ಯೆ ಇಲ್ಲ. ಸಧ್ಯ ಚಾಮರಾಜ ನಗರ ಜಿಲ್ಲೆಯಲ್ಲಿ ಏನು ಸಮಸ್ಯೆ ಆಗುತ್ತಿಲ್ಲ.. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನ ಸರ್ಕಾರದಿಂದ ಇಂದಿನಿಂದ ನೇಮಿಸಲಾಗಿದೆ. ನೆರೆ ಸಂತ್ರಸ್ಥರಿಗೆ ದಾನಿಗಳು ಅವಶ್ಯಕತೆ ಇರುವ ವಸ್ತುಗಳನ್ನ ನೀಡಿ ಎಂದು ಮನವಿ ಮಾಡಿದರು.
ಮೈಸೂರು ನಾಗರೀಕ ವೇದಿಕೆ, ಜಿ ಎಸ್ ಎಸ್ ಫೌಂಡೇಶನ್ ನ ಶ್ರೀ ಹರಿ ಹಾಗೂ ಸೇಫ್ ವೀಲ್ ಪ್ರಶಾಂತ್ ಒಳಗೊಂಡಂತೆ ಹಲವು ಎನ್. ಜಿ ಓ ಸಂಸ್ಥೆಗಳು ಕ್ರಮಬದ್ದವಾಗಿ ನೆರವಾಗಲು ಮುಂದಾಗಿದ್ದಾರೆ. ಈಗಾಗಲೇ ನೆರೆ ಸಂತ್ರಸ್ಥರಿಗೆ ನೆರವಾಗಲು ದಾನಿಗಳು ನೀಡಲಿರುವ ವಸ್ತುಗಳು ತಲುಪುವ ವ್ಯವಸ್ಥೆ ಮಾಡಲಾಗ್ತಿದೆ. ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಇಂದೇ ಭೇಟಿ ನೀಡುತ್ತೇನೆ ಎಂದ ಶಾಸಕ ಎಸ್. ಎ ರಾಮದಾಸ್ ತಿಳಿಸಿದರು.
Key words: MLA-SA Ramadas-help -neighboring –victims-mysore