ಬೆಂಗಳೂರು:ಆ-9:(www.justkannada.in) ರಾಜ್ಯದ 77 ಶಾಸಕರು ಲೋಕಾಯುಕ್ತಕ್ಕೆ ಇನ್ನೂ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಆಸ್ತಿ ವಿವರ ಲೋಕಾಯುಕ್ತಕ್ಕೆ ಸಲ್ಲಿಸಲು ಜೂನ್ 30 ಕೊನೆ ದಿನವಾಗಿತ್ತು. ಗಡುವಿನ ಅವಧಿ ಮುಗಿದರೂ ಈ ಶಾಸಕರು ತಮ್ಮ ಆಸ್ತಿ ವಿವರವನ್ನು ಸಲ್ಲಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಆಸ್ತಿ ವಿವಿಅರ ಸಲ್ಲಿಸದ ಶಾಸಕರ ಪಟ್ಟಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಬೆಂಗಳೂರಿನ ನಾಲ್ವರು ಶಾಸಕರು ಹಾಗೂ ಶಾಸಕರಾದ ರೇಣುಕಾಚಾರ್ಯ, ಸಿ.ಎಸ್.ಪುಟ್ಟರಾಜು, ಅಡಗೂರ್ ಎಚ್ ವಿಶ್ವನಾಥ್, ಯು.ಟಿ.ಖಾದರ್, ಡಾ.ಅಂಜಲಿ ಹೇಮಂತ್ ನಿಂಬಲ್ಕರ್ ಮತ್ತು ಜಮೀರ್ ಅಹ್ಮದ್ ಖಾನ್ ಇತರರ ಹೆಸರೂ ಸೇರಿವೆ.
ಜೂನ್ 30 ರಜಾದಿನವಾದ್ದರಿಂದ ಜುಲೈ 1 ರಂದು ಯತೀಂದ್ರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಶ್ರೀರಾಮುಲು ಮತ್ತು ಇತರರು ಸೇರಿದಂತೆ ಹನ್ನೆರಡು ಶಾಸಕರು ಆಸ್ತಿ ವಿವರ ಸಲ್ಲಿಸಿದ್ದಾರೆ.
ಶಾಸಕ ಶರಣಪ್ಪ ಮಟ್ಟೂರ ಅವರು ಮಾತ್ರ ಜೂನ್ 30ರೊಳಗೆ ಅವಧಿಗೂ ಮುನ್ನವೇ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಉಳಿದಂತೆ ಹಲವರು ಜುಲೈ 1ರಂದು ಸಲ್ಲಿಸಿದರೆ ಇನ್ನೂ 77 ಶಾಸಕರು ಆಸ್ತಿವಿವರ ಈವರೆಗೆ ಸಲ್ಲಿಸಿಲ್ಲ.
ಕಳೆದ ವರ್ಷ, ಆರು ಶಾಸಕರು ಗಡುವು ಮುಗಿದ ಎರಡು ತಿಂಗಳ ನಂತರವೂ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ತಮ್ಮ ಆಸ್ತಿ ಮತ್ತು ಬಾಧ್ಯತೆಗಳನ್ನು ಇನ್ನೂ ಸಲ್ಲಿಸದ ಎಲ್ಲರಿಗೂ ಜ್ಞಾಪನೆಯನ್ನು ಕಳುಹಿಸಲು ನಾವು ಯೋಚಿಸುತ್ತಿದ್ದೇವೆ ಏಕೆಂದರೆ ಕಳೆದ ವರ್ಷ ಜ್ಞಾಪನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಲೋಕಾಯುಕ್ತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.