ಮುಂಬೈ,ಜೂನ್,28,2022(www.justkannada.in): ಸರ್ಕಾರದ ವಿರುದ್ಧ ಬಂಡೆದ್ಧು ಗುವಾಹಟಿಯಲ್ಲಿ ವಾಸ್ತವ್ಯ ಹೂಡಿರುವ ರೆಬಲ್ ಶಾಸಕರ ಮನವೊಲಿಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಂತಿಮ ಕಸರತ್ತು ನಡೆಸಿದ್ದಾರೆ.
ಹೌದು ಮುಂಬೈಗೆ ವಾಪಸ್ ಆಗುವಂತೆ ರೆಬೆಲ್ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮಂಬೈಗೆ ಬನ್ನಿ ಮುಖಾಮುಖಿ ಭೇಟಿಯಾಗಿ ಮಾತನಾಡೋಣ. ಪರಸ್ಪರ ಚರ್ಚಿಸಿ ನಮ್ಮೆಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳೋಣ. ನಾನು ನಿಮ್ಮ ಕುಟುಂಬದ ಹಿರಿಯ ಸದಸ್ಯನಂತೆ ನೀವು ಯಾವುದೇ ಒತ್ತಡ ಇಲ್ಲದೆ ನನ್ನ ಬಳಿ ಬನ್ನಿ. ನಾವೆಲ್ಲರೂ ಒಟ್ಟಾಗಿ ಈ ಸನ್ನಿವೇಶದಿಂದ ಹೊರಬರೋಣ. ಬಂದು ಮಾತನಾಡಿ ಎಂದು ಮನವಿ ಮಾಡಿದ್ದಾರೆ.
ನೀವು ರಾಜೀಕಿಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಪಕ್ಷ ಕಾರಣ. ನಿಮ್ಮ ಗೌರವ ಸನ್ಮಾನಗಳಿಗೆ ಶಿವಸೇನೆ ಕಾರಣ. ಹೀಗಾಗಿ ಪಕ್ಷ ವಿಭಜನೆ ನೀವು ಸಹಿಸಲ್ಲ ಎಂದು ಭಾವಿಸಿದ್ದೇನೆ. ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡಬೇಡಿ . ನಿಮ್ಮ ಭಾವನೆಗಳಿಗೆ ಶಿವಸೇನೆ ಈಗಲೂ ಬೆಲೆ ಕೊಡುತ್ತದೆ. ಶಿವಸೇನೆ ನಿಮ್ಮನ್ನು ಯಾವತ್ತು ಕೈಬಿಡುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Key words: Rebel MLAs- maharastra- CM- Uddhav Thackeray – letter