ಚಿಕ್ಕಮಗಳೂರು, ಆಗಸ್ಟ್ 08, 2019 (www.justkannada.in): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಭದ್ರಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ.
ಬಾಳೆಹೊನ್ನೂರು ಪಟ್ಟಣಕ್ಕೂ ಭದ್ರಾ ನದಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭದ್ರಾ ನದಿ ಆರ್ಭಟಕೆ ಚಿಕ್ಕಮಗಳೂರು ತಾಲೂಕಿ ಖಾಂಡ್ಯ ಬಾಳಗದ್ದೆ ತೂಗುಸೇತು ನೀರಿನಲ್ಲಿ ಕೊಚ್ಚಿ ಹೋಗಿದೆ.
ಇದರಿಂದ ಬಾಳಗದ್ದೆ ಗ್ರಾಮಕ್ಕೆ ಸಂಪರ್ಕ ಕೊಂಡಿ ಇಲ್ಲವಾಗಿದೆ. ಇಲ್ಲಿರುವ ಸುಮಾರು 50ಕ್ಕೂ ಅಧಿಕ ಕುಟುಂಬಗಳು ಅತಂತ್ರರಾಗಿದ್ದು, ಆತಂಕದಿಂದ ಕಾಲ ಕಳೆಯುಂತಾಗಿದೆ. ಬಳಿಕ ಸೇತುವೆ ಬಳಿಯ ಮನೆಗಳಿಂದ ರಾತ್ರಿಯ ವೇಳೆ ಜನರನ್ನು ಅಧಿಕಾರಿಗಳು, ಪೊಲೀಸರು, ಅಗ್ನಿಶಾಮ ದಳ ಸಿಬ್ಬಂದಿ ಸೇರಿ ಬೋಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.