ಕೆಆರ್ ಎಸ್ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿ ಪಾತ್ರದ ಜನರಿಗೆ ಎಚ್ಚರಿಕೆ.

ಮೈಸೂರು,ಜುಲೈ,7,2022(www.justkannada.in): ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಾವೇರಿ ಜಲಾನಯನ ತಗ್ಗು ಪ್ರದೇಶಕ್ಕೆ ಪ್ರವಾಹ ಮುನ್ಸೂಚನೆ ನೀಡಲಾಗಿದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.

ಕೃಷ್ಣರಾಜ ಸಾಗರ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಕೆಆರ್ ಎಸ್ ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಹರಿವು ಹೆಚ್ಚಿಸುವ ಸಾಧ್ಯತೆ ಇದೆ.

ಅದ್ದರಿಂದ ನದಿ ಪಾತ್ರದ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಜನಜಾನುವಾರುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕೃಷ್ಣರಾಜಸಾಗರ ಕಾರ್ಯಪಾಲಕ ಇಂಜಿನಿಯರ್ ಸಂದೇಶ ರವಾನಿಸಿದ್ದಾರೆ.

Key words: Heavy rains -KRS -Warning – people -safe place.

ENGLISH SUMMARY…

Heavy rainfall in KRS catchment area: People living in catchment area warned to shift to safer places
Mysuru, July 7, 2022 (www.justkannada.in): People living in the KRS reservoir catchment area have been warned to shift to safer places, following prediction of heavy rainfall in the surrounding area by the Metereological Department.
The inflow of water to the reservoir has increased due to the heavy rainfall in and around KRS reservoir. Hence, the outflow of water from the reservoir might be increased any time. Hence the authorities concerned have warned the people living in the catchment area and low lying areas to shift to safer places.
Keywords: KRS Reservoir/ rainfall/ catchment area/ safer places/ warning