ಬೆಂಗಳೂರು, ಜುಲೈ 07, 2022 (www.justkannada.in): ಏಷ್ಯಾ ಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಅಸೋಷಿಯೇಷನ್ ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್ಗೂ ಮುನ್ನವೇ ಏಷ್ಯಾಕಪ್ ನಡೆಯಲಿದೆ.
ಈ ಬಾರಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ ಭಾರತ ತಂಡವು ಪಾಕಿಸ್ತಾನ್ ದ ವಿರುದ್ದ ಸೆಣೆಸಾಡಲಿದೆ. ಇಲ್ಲಿ ಪಾಕಿಸ್ತಾನದ ವಿರುದ್ದ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.
ಭಾರತ-ಪಾಕ್ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದ ಕಾರಣ, ಮತ್ತೊಮ್ಮೆ ಮುಖಾಮುಖಿಗೆ ಐಸಿಸಿ ಟಿ20 ವಿಶ್ವಕಪ್ ತನಕ ಕಾಯಲೇಬೇಕಿತ್ತು. ಇದೀಗ ಏಷ್ಯಾ ಕಪ್ ನಲ್ಲಿ ಅದಕ್ಕೆ ವೇದಿಕೆ ಸಿಗಲಿದೆ.
ಈ ಬಾರಿ ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸಲಿದ್ದು, ಅದರ ಮೊದಲ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ.