ಬೆಂಗಳೂರು,ಜುಲೈ,12,2022(www.justkannada.in): ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ ಯೋಜನೆಯ ಭಾಗವಾಗಿ ಈ ವರ್ಷದ ನವೆಂಬರ್ 11ರಿಂದ ಡಿಸೆಂಬರ್ 12ರವರೆಗೆ ಪ್ರತಿಷ್ಠಿತ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ ನಡೆಯಲಿದೆ. ಈ ಉತ್ಸವದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇದ್ದರು. ನಂತರ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಈ ಉತ್ಸವದಲ್ಲಿ ದೇಶ- ವಿದೇಶಗಳ ಖ್ಯಾತ ವಿನ್ಯಾಸಕಾರರು ಮತ್ತು ಶಿಲ್ಪಿಗಳು ಭಾಗವಹಿಸಲಿದ್ದಾರೆ. ಆಧುನಿಕ ಯುಗದಲ್ಲಿ ಆಕರ್ಷಕ ಮತ್ತು ಹೊಸತನದಿಂದ ಕೂಡಿರುವ ವಿನ್ಯಾಸವೇ ಸರ್ವಸ್ವವೂ ಆಗಿದೆ ಎಂದರು.
ಈ ಉತ್ಸವದ ಮೂಲಕ ಬೆಂಗಳೂರು ನಗರವು ವಿನ್ಯಾಸ ಕ್ಷೇತ್ರದ ಕಲಿಕೆ, ಅನ್ವಯಿಕತೆ, ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ದೇಶದ ಅಗ್ರಗಣ್ಯ ನಗರವಾಗಲಿದೆ. ಜತೆಗೆ, ಈ ಕ್ಷೇತ್ರದಲ್ಲಿ ಯುವಜನರಿಗೆ ಹೇರಳ ಉದ್ಯೋಗ ಅವಕಾಶ ದೊರೆಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಕಲೆ ಮತ್ತು ವಿನ್ಯಾಸ ಆಧರಿತ ಆರ್ಥಿಕತೆಯು ಭವಿಷ್ಯದ ದಾರಿಯಾಗಿದೆ. ಬೆಂಗಳೂರು ನಗರವು ಇದರ ರಾಜಧಾನಿಯಾಗಿ ಹೊರಹೊಮ್ಮಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದರು.
ಬೆಂಗಳೂರು ಯುವಜನರಿಗೆ ಡಿಸೈನ್ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳು ಕಾದಿವೆ. ಇದಕ್ಕೆ ಬೇಕಾದ ಕೌಶಲಗಳನ್ನು ಕಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕೆಲ ತಿಂಗಳ ಹಿಂದೆ ದುಬೈ ವಾಣಿಜ್ಯ ಮೇಳಕ್ಕೆ ತೆರಳಿದ್ದಾಗ ಈ ಯೋಜನೆ ಮತ್ತು ಬೆಂಗಳೂರು ಡಿಸೈನ್ ಫೆಸ್ಟಿವಲ್ ಬಗ್ಗೆ ಉಪಕ್ರಮ ಆರಂಭಿಸಲಾಗಿತ್ತು ಎಂದು ಅವರು ನುಡಿದರು.
ಬೆಂಗಳೂರು ಡಿಸೈನ್ ಫೆಸ್ಟಿವಲ್ ಗೆ ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ವರ್ಲ್ಡ್ ಡಿಸೈನ್ ಕೌನ್ಸಿಲ್, ಜೈನ್ ವಿವಿ ಮುಂತಾದ ಸಂಸ್ಥೆಗಳು ಸಹಭಾಗಿತ್ವ ನೀಡುತ್ತಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಸ್ಡಿಸಿ ಮುಖ್ಯಸ್ಥ ಟಾಮ್ ಜೋಸೆಫ್, ಡಿಜಿಟಲ್ ವಿಭಾಗದ ನಿರ್ದೇಶಕ ಅರುಣ್ ಬಾಲಚಂದ್ರನ್ ಉಪಸ್ಥಿತರಿದ್ದರು.
Key words: Bangalore -Design Festival – November 11
ENGLISH SUMMARY…
The first “Bengaluru Design Festival” to be held from Nov 11 to Dec 12
Bengaluru: Chief Minister, Basavaraj Bommai on Tuesday, unveiled the logo of the first-ever Bengaluru Design Festival scheduled to be held from coming Nov 11 to Dec 12 (for one month) and launched the festival campaign.
Dr.Ashwath Narayan, Minister of Skill Development, Higher Education and IT & BT, who was present at the event said, “Smart and innovative design is at the core of everything we do today. The festival will open up a lot of opportunities for all the stakeholders and put Bengaluru at the forefront as a design destination, be it learning, applying, activities or developing creative solutions”.
Further, he stated, this would be a programme of over 500 events and activities, including Design Summits, Installations, Workshops, Design Talks, Exhibits, Design Challenges, etc., The first edition is expected to witness a gathering of over 50,000 design professionals, architects, thought leaders, is policy makers & government officials, creative minds, and students, he informed.
The event would be held with the support of the Government of Karnataka in association with ISDC – International Skill Development Corporation, World Design Council, Jain (Deemed-to-be-University), various professional and industry bodies like Confederation of Indian Industries (CII), Association of Designers for India (ADI), etc.
Home Minister Araga Jnanendra, Tom Joseph, Executive Director for Strategy and Development, ISDC, and Arun Balachandran, Director, Digital Division were present.