ಮಾಜಿ ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.

ಬೆಂಗಳೂರು,ಜುಲೈ,13,2022(www.justkannada.in): ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಎಸ್​ ವೈ ನಿವಾಸಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್,  ಬಿಎಸ್ ಯಡಿಯೂರಪ್ಪ ನಮ್ಮ ಸಮಾಜದ ಹಿರಿಯ ಮುಖಂಡರು. ಹೀಗಾಗಿ ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ. ಅಷ್ಟೆ,  ಕುತೂಹಲದ ವಿಚಾರ ಏನಿಲ್ಲ. ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ. ಇಂದು ಗುರುಪೂರ್ಣಿಮಾ. ಹಾಗಾಗಿ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಭೇಟಿಯಾಗಿದ್ದೆ. ಕೆಲವೊಂದು ವಿಚಾರದಲ್ಲಿ ಬಿಎಸ್ ವೈ ಮಾರ್ಗದರ್ಶನ ಅಗತ್ಯ. ಆದರೆ ರಾಜಕಾರಣದ ಚರ್ಚೆ ನಡೆಸಿಲ್ಲ” ಎಂದು ತಿಳಿಸಿದರು.

“ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎನ್ನುವ ಆಸಕ್ತಿ ಯಡಿಯೂರಪ್ಪ ಅವರಿಗಿತ್ತು. ಆದರೆ ಕಾರಣಾಂತರಗಳಿಂದ ಕೊಡಲು ಆಗಲಿಲ್ಲ. ಆದರೂ ಶೀಘ್ರದಲ್ಲೇ ನಮಗೆ ಮೀಸಲಾತಿ ಸಿಗುವ ಭರವಸೆ ಇದೆ. ಸಿಎಂ ಬೊಮ್ಮಾಯಿ ಅವರ ಮೇಲೆಯೂ ಭರವಸೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

Key words: Congress- MLA -Lakshmi Hebbalkar -met -former CM- BSY

ENGLISH SUMMARY…

Cong. MLA Lakshmi Hebbalkar’s meeting with former CM BSY triggers curiosity
Bengaluru, July 13, 2022 (www.justkannada.in): Congress MLA Lakshmi Hebbalkar’s meeting with former Chief Minister B.S. Yediyurappa and discussion has triggered curiosity among the people.
Lakshmi Hebbalkar visited the residence of the former Chief Minister and discussed for some time. Speaking to the media persons later she said, “BSY is a senior leader of our community. This was only a cordial visit. There is nothing curious about it. I usually meet him whenever I come to Bengaluru. Today is Guru Poornima, hence I met him to take his blessings. I look out for his guidance on several aspects. I didn’t discuss politics.”
“BSY intended to provide reservation under 2A for the Panchamasali community. But he couldn’t fulfill it due to several reasons. However, we are confident of getting the reservation soon. We also trust the present Chief Minister Basavaraj Bommai,” Hebbalkar said.
Keywords: Cong. MLA/ Lakshmi Hebbalkar/ former CM B.S. Yediyurappa/ visit/ discuss