ಒಬ್ಬ ವ್ಯಕ್ತಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ: ರಾಜ್ಯಹಿತ ಕಾಯಲು ಕಾಂಗ್ರೆಸ್ ಬೆಂಬಲಿಸಿ- ಡಿ.ಕೆ ಶಿವಕುಮಾರ್.

ಮೈಸೂರು,ಜುಲೈ,19,2022(www.justkannada.in):  ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇರಿಸಿದೆ. ರಾಜ್ಯಹಿತ ಕಾಯಲು ಕಾಂಗ್ರೆಸ್ ಬೆಂಬಲಿಸಿ ಎಂದು ರಾಜ್ಯದ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ಮೈಸೂರಿನ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್,  40 ವರ್ಷದ ರಾಜಕಾರಣದಲ್ಲಿ ಮೈಸೂರು ಪತ್ರಕರ್ತರ ಸುದ್ದಿ ಬಹಳ ವೈಭವದಿಂದ ಇದೆ.ಇಲ್ಲಿಯ ಸುದ್ದಿಗಳು ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತೆ. ಇಲ್ಲಿಯ ಲೋಕಲ್ ಮೀಡಿಯಾ ತುಂಬಾ ಸ್ಟ್ರಾಂಗ್ ಇದೆ ಎಂದು ಹೊಗಳಿದರು.

ಬಿಜೆಪಿ ಸರ್ಕಾರ ಬಂದ ಮೇಲೆ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗಿದೆ‌.ಬೈ ಎಲೆಕ್ಷನ್ ಸೋತ ಮೇಲೆ ಸ್ವ ಇಚ್ಛೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆವು‌. ನಂತರ ನಾನು ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ವಿಪಕ್ಷ ನಾಯಕ ಮಾಡಲಾಯಿತು. 5 ಜನ ಕಾರ್ಯಾಧ್ಯಕ್ಷರ ಜೊತೆಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ ಈ ಟೀಂ ಮಾಡಿದ್ದಾರೆ. ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ಸಿದ್ದರಾಮಯ್ಯ ಎಲ್ಲ ಸೇರಿ ಈ ಟೀಂ ಮಾಡಿದ್ದೇವೆ ಎಂದರು.

ಇವತ್ತಿಗೂ ಕೋವಿಡ್‌ ನಿಂದ ಸತ್ತವರಿಗೆ ಈಗಲೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದುರಂತ ಆಯ್ತು. ತಕ್ಷಣ ಸ್ಥಳಕ್ಕೆ ನಾನು ಸಿದ್ದರಾಮಯ್ಯ ಹೋಗಿದ್ವಿ. ಬಳಿಕ ಹೋರಾಟ ಮಾಡಿ ಸತ್ತವರ ಕುಟುಂಬಕ್ಕೆ ಕೋರ್ಟ್ ಮೂಲಕ ಪರಿಹಾರ ಕೊಡಿಸಲಾಯಿತು. ಬಳಿಕ ನಾವೇ ಪ್ರತಿ ಕುಟುಂಬವನ್ನೂ ಭೇಟಿ ಮಾಡಿ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದೇವೆ. ಸರ್ಕಾರ ಈವರೆಗೂ ಅವರಿಗೆ ಸರಿಯಾದ ಪರಿಹಾರ ತಲುಪಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ಬೆಡ್, ಔಷಧಿ ಸಾಮಾಗ್ರಿಗಳ ಕೊರತೆ ಬಗ್ಗೆ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ದೊಡ್ಡ ಭ್ರಷ್ಟ ಸರ್ಕಾರ ಅಂದ್ರೆ ಅದು ಬಿಜೆಪಿ ಸರ್ಕಾರ.

ದೇಶದಲ್ಲಿ ದೊಡ್ಡ ಭ್ರಷ್ಟ ಸರ್ಕಾರ ಅಂದ್ರೆ ಅದು ಬಿಜೆಪಿ ಸರ್ಕಾರ. ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್, ಯತ್ನಾಳ್ ಕೂಡ ಕಮಿಷನ್ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಪಕ್ಷದವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಿದ್ದಾರೆ. ಆದರೂ ಸರ್ಕಾರ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಸೋನಿಯಾ ಗಾಂಧಿಯವರ ಮೇಲೆ ಉದ್ದೇಶ ಪೂರ್ವಕವಾಗಿ ಇಡಿ ವಿಚಾರಣೆ ಮಾಡಿಸಲಾಗ್ತಿದೆ. ಶಾಸಕಾಂಗ, ಕಾರ್ಯಾಂಗದ ಹಣೆಬರಹ ಬರೆಯುವುದು ಪತ್ರಿಕಾರಂಗ. ಪತ್ರಿಕಾರಂಗ ಸತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪರಿಹಾರ ಹಣ ಎಲ್ಲಿಗೆ ಕೊಟ್ಟಿದೆ ಅಂತ ಹೇಳಲು ಆಗುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಹುದ್ದೆಗಳು ಬಹಿರಂಗವಾಗಿ ಮಾರಾಟ ಆಗ್ತಿವೆ. ಐಪಿಎಸ್ ಹಗರಣದಂತೆ ಭ್ರಷ್ಟಾಚಾರ ಮತ್ತೊಂದಿಲ್ಲ. ಇದು ಕೇವಲ ಪೊಲೀಸ್ ಇಲಾಖೆಯಲ್ಲ, ಬೇರೆ ಇಲಾಖೆಯಲ್ಲೂ ನಡೆಯುತ್ತಿದೆ. ಗುಲ್ಬರ್ಗಾ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ಹೇಳಿದ್ದಾರೆ. 40% ಕಮಿಷನ್ ಕೇಸ್ ಮುಚ್ಚಿ ಹಾಕಲಾಗ್ತಿದೆ ಎಂದು ಆರೋಪಿಸಿದರು.

ರಾಜ್ಯ ಹಿತ ಕಾಯಲು ಕಾಂಗ್ರೆಸ್ ಪಕ್ಷ  ಬೆಂಬಲಿಸಿ. ಪ್ರತಿಪಕ್ಷ ವೀಕಾಗಿದ್ರೆ ಮಂತ್ರಿಗಳು ರಾಜೀನಾಮೆ ಕೊಡುತ್ತಿರಲಿಲ್ಲ. ನಾವು ಹಲವು ವಿಚಾರ ತೆಗೆದುಕೊಂಡು ಹೋರಾಟ ಮಾಡಿದ್ದೇವೆ.

ಬೊಮ್ಮಾಯಿ ಸಾಧನ ಸಮಾವೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾವೇಶ ಮಾಡಬಹುದು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಾವು ಕೊಟ್ಟ ಬಹುತೇಕ ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ 40% ಕೂಡ ಕೆಲಸ ಮಾಡಿಲ್ಲ. ಅವರು ಏನು ಸಾಧನೆ ಮಾಡಿದ್ದಾರೆ ತಿಳಿಸಲಿ. ಕಾಂಗ್ರೆಸ್‌ ನಲ್ಲಿ ಯಾವುದೇ ಬಣ ಇಲ್ಲ. ಇರುವುದು ಕಾಂಗ್ರೆಸ್ ಬಣ ಒಂದೇ. ನನಗೇ ಪಕ್ಷ, ಪಕ್ಷದ ಧ್ವಜ ಮುಖ್ಯ. ಇಲ್ಲಿ‌ ವರ, ಶಾಪ ಯಾರಿಗೂ ಸಿಗಲ್ಲ, ಅವಕಾಶ ಅಷ್ಟೇ ಎಂದರು.

ನಾನೇನು ಸನ್ಯಾಸಿನಾ.? ನಾನೂ ಖಾದಿ ಬಟ್ಟೆ ಹಾಕಿದ್ದೇನೆ. ಮೊದಲು ಪಕ್ಷ ಅಧಿಕಾರಕ್ಕೆ ಬರಲಿ. ನಂತರ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಇಷ್ಟು ದೂರ ಬಂದಿದ್ದೀರಿ ಮೈ ಮರೆಯಬೇಡಿ ಅಂತ ಕಾರ್ಯಕರ್ತರಿಗೆ ಹೇಳಿದ್ದೇನೆ. ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ, ರಾಜ್ಯದ ಎಲ್ಲಾ ಸಮುದಾಯ ನನ್ನ ಜೊತೆ ನಿಲ್ಲುತ್ತೆ. ಇದರ ಮೇಲೆ ನನಗೆ ಬಹಳ ವಿಶ್ವಾಸ ಇದೆ ಎಂದು ನುಡಿದರು.

ಬಿಜೆಪಿ ಜೆಡಿಎಸ್ ನ ಕೆಲ ನಾಯಕರು ಕಾಂಗ್ರೆಸ್ ಸೇರುವ ಸುಳಿವು ನೀಡಿದ ಡಿಕೆಶಿ, ಆದರೆ ಅದರ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅದನ್ನು ರಹಸ್ಯವಾಗಿ ಇಡುತ್ತೇನೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದರು.

ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಒಬ್ಬೊಬ್ಬರು ಒಂದು ವಿಧದಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸಿದ್ದರಾಮಯ್ಯನವರ ಇದುವರೆಗಿನ ಜೀವನವನ್ನು ಮೆಲುಕು ಹಾಕುವ ಸಲುವಾಗಿ ಸಿದ್ದರಾಮೋತ್ಸವ ಆಯೋಜನೆ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ನಾನು ಹಾಗು ರಾಹುಲ್ ಗಾಂಧಿಯವರು ಭಾಗಿಯಾಗುತ್ತೇವೆ‌. ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡೆ. ನಾನು ಪತ್ನಿ ಸಮೇತ ಕೇದಾರನಾಥಕ್ಕೆ ಹೋಗಿದ್ದೆ. ಹುಟ್ಟುಹಬ್ಬ ಆಚರಣೆ ವಿಚಾರದಲ್ಲಿ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿಯಾಗಿರುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರೊಬ್ಬರು ಮುಖ್ಯಮಂತ್ರಿ ಯಾಕಾಗಬಾರದು? ಎಂದು ಡಿ.ಕೆಶಿ ತಿಳಿಸಿದರು.

Key words: no question – going – polls – one person-Congress-DK Shivakumar.

ENGLISH SUMMARY….

No question of going to elections in the name of a person: Support Cong. for the interest of State – DKS
Mysuru, July 19, 2022 (www.justkannada.in): “We will face the forthcoming assembly elections under mass leadership. We won’t face the polls in the name of a person. The Congress party believes in mass leadership. Please support the Congress party for the interest of the State,” appealed KPCC President D.K. Shivakumar.
Addressing a press meet today in Mysuru, D.K. Shivakumar expressed his view that the journalism ethics of the journos in Mysuru was the best as he has observed in his 40 years of political life. “Mysuru news draws the attention of the leaders and the people at the national level. The local media in Mysuru is strong,” he said.
“The lives of people is in deep trouble after the BJP came to power. We resigned voluntarily after we lost the byelections. After that I became the KPCC president and Siddaramaiah was made the leader of the opposition in the assembly. The high command has made me the president along with 5 other executive presidents team,” he explained.
“The kith of persons who lost their lives due to COVID has still not received the compensation amount. You can remember the oxygen shortage incident in Chamarajanagara. Me and Siddaramaiah visited the spot immediately. We made efforts to ensure that the kith of the people who lost their lives received the compensation amount. After that we visited every family and gave Rs. 1 lakh to the families each. But the State Govt. has still not given the compensation amount. We also fought against the government against the shortage of beds, medicine, etc. during the pandemic,” he added.
Keywords: D.K. Shivakumar/ elections/ person