ಮೈಸೂರು ಆ.11,2019(www.justkannada.in): ಚಾವಿಸನಿನಿ ವ್ಯಾಪ್ತಿಗೆ ಒಳಪಡುವ ಐದು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಹೊಳೆ/ನದಿಗಳು ಉಕ್ಕಿ ಹರಿಯುತ್ತಿದ್ದು ಕೆರೆ/ಅಣೆಕಟ್ಟುಗಳು ತುಂಬುತ್ತಿವೆ. ಹಲವಾರು ಕಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ವಿದ್ಯುತ್ ಸಂಪರ್ಕದಲ್ಲೂ ಸಹ ಹೆಚ್ಚಿನ ಪ್ರಮಾಣದ ಅಡಚಣೆ ಉಂಟಾಗಿದೆ. ಹೀಗಾಗಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ನಿಗಮ ವ್ಯಾಪ್ತಿಯಲ್ಲಿ “ನೋಡಲ್ ಅಧಿಕಾರಿ” ಗಳನ್ನು ನೇಮಿಸಲಾಗಿದೆ.
ಹಲವಾರು ಕಡೆ ಕಂಬಗಳು/ವಿದ್ಯುತ್ ಪರಿವರ್ತಕಗಳು ಮುರಿದು ಬಿದ್ದಿದ್ದು ಹಾಗೂ ವಿದ್ಯುತ್ ಮಾರ್ಗಗಳ ಸಮನಾಂತರಕ್ಕೆ ನೀರಿನ ಹರಿವು ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ/ಅಡಚಣೆ ಉಂಟಾಗಿರುತ್ತದೆ. ಕೆಲವೊಂದು ಕಡೆಗಳಲ್ಲಿ ಮಳೆಯ ಪ್ರಮಾಣವನ್ನು ಗಮನದಲ್ಲಿ ಇಟ್ಟುಗೊಂಡು ಮುನ್ನೆಚರಿಕಾ ಕ್ರಮವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ
ಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬೇರೆ ಸ್ಥಳಗಳಿಂದ ಈಗಾಗಲೇ ಹೆಚ್ಚುವರಿ ಸಿಬ್ಬಂದಿಯನ್ನು ಸಹಾ ನಿಯೋಜಿಸಲಾಗಿದೆ. ಪ್ರವಾಹವು ಇಳಿಮುಖವಾಗಿರುವ ಪ್ರದೇಶದಲ್ಲಿ ಈಗಾಗಲೇ ದುರಸ್ಥಿ ಕಾರ್ಯಗಳನ್ನು ಕೈಗೆತ್ತಿಗೊಳ್ಳಲಾಗಿದೆ. ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ನಿಗಮ ವ್ಯಾಪ್ತಿಯಲ್ಲಿ “ನೋಡಲ್ ಅಧಿಕಾರಿ” ಗಳನ್ನು ನೇಮಿಸಲಾಗಿದೆ. ಸಾರ್ವಜನಿಕರು ವಿದ್ಯುತ್ ಸರಬರಾಜಿನ ಸಮಸ್ಯೆಗಳ ಬಗ್ಗೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿಗಮ ವ್ಯಾಪ್ತಿಗೆ ನೋಡಲ್ ಅಧಿಕಾರಿ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ವಿ.ಪ್ರಕಾಶ್-ಮೊಬೈಲ್ ಸಂಖ್ಯೆ 9448994704, ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಗೆ ಅಧೀಕ್ಷಕ ಇಂಜಿನಿಯರ್(ವಿ) ಕೆ.ಎಂ.ಮುನಿಗೋಪಾಲ್ ರಾಜು-9448994733, ಚಾಮರಾಜನಗರ-ಕೊಡಗು ಜಿಲ್ಲೆಗೆ ಅಧೀಕ್ಷಕ ಇಂಜಿನಿಯರ್(ವಿ) ಕೆ.ಎಂ.ಮಹದೇವಸ್ವಾಮಿ ಪ್ರಸನ್ನ-9449598533, ಮಂಡ್ಯ ಜಿಲ್ಲೆಗೆ ಅಧೀಕ್ಷಕ ಇಂಜಿನಿಯರ್(ವಿ) ಎನ್.ಶ್ರೀನಿವಾಸಮೂರ್ತಿ-9449598633, ಹಾಸನ ಜಿಲ್ಲೆಗೆ ಅಧೀಕ್ಷಕ ಇಂಜಿನಿಯರ್(ವಿ)ಬಿ.ಎಸ್.ಸುಚೇತನ್-9448994933 ನೇಮಕ ಮಾಡಲಾಗಿದೆ.
ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ವಿವರ ಇಂತಿದೆ……
ಮೈಸೂರು ತಾಲ್ಲೂಕಿಗೆ (ನರಸಿಂಹರಾಜ, ಕೃಷ್ಣರಾಜ, ಭಾಗಶ: ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರ) ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಹೆಚ್.ಎಸ್.ಸ್ವಾಮಿ-9448994740, ಮೈಸೂರು ತಾಲ್ಲೂಕಿಗೆ (ಚಾಮರಾಜ ಮತ್ತು ಭಾಗಶ: ಚಾಮುಂಡೇಶ್ವರಿ ಕ್ಷೇತ್ರ) ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಪಿ.ಚಿಕ್ಕಸಿದ್ದೇಗೌಡ-9449598644, ನಂಜನಗೂಡು ಮತ್ತು ಟಿ.ನರಸೀಪುರ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಚ್.ಕೆ.ರಮೇಶ್-9448994781, ಹುಣಸೂರು ಮತ್ತು ಹೆಚ್.ಡಿ.ಕೋಟೆ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎ.ಎ.ಸುನೀಲ್‍ಕುಮಾರ್-9448994805, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಬಿ.ಎಸ್.ಚಂದ್ರಶೇಖರ್-9448998009.
ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಆರ್.ಪೂರ್ಣಚಂದ್ರತೇಜಸ್ವಿ-9448994864, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಟಿ.ಪ್ರದೀಪ್-9449598636.
ಮಡೀಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಬಿ.ಸೋಮಶೇಖರ್-9449598601,
ಹಾಸನ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹೆಚ್.ಎನ್.ಸ್ವಾಮಿಗೌಡ-9448994938, ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಜಿ.ಜಗದೀಶ್-9480841177, ಅರಸೀಕೆರೆ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಡಿ.ಸೋಮಶೇಖರ್‍ಗೌಡ-9449598643, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಕೆ.ಬಿ.ಶಿವಕುಮಾರ್-9448994983, ಚನ್ನರಾಯಪಟ್ಟಣ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಆರ್.ಅಂಬಿಕಾ-9448994961,
ಮಂಡ್ಯ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಕೆ.ಎನ್.ಶಿವಕುಮಾರ್-9448994730, ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಇ.ರವಿಶಂಕರ್-9448994828, ನಾಗಮಂಗಲ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ನಾರಾಯಣ ಕಳ್ಳಿಮನಿ-9448994727, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಎಲ್.ಸೋಮರಾಜ್-9448994893, ಕೆ.ಆರ್.ಪೇಟೆ ತಾಲ್ಲೂಕಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಬಿ.ನಾಗರಾಜ್-9480844740 ನೋಡಲ; ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಸಾರ್ವಜನಿಕರು ವಿದ್ಯುತ್ ಸರಬರಾಜಿನ ಸಮಸ್ಯೆಗಳ ಬಗ್ಗೆ ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Key words: Flood –rain- Appointment – Nodal Officers –CESCOM