ಬೆಂಗಳೂರು,ಜುಲೈ,21,2022(www.justkannada.in): ಜಾರಿ ನಿರ್ದೇಶನಾಲಯದಿಂದ ಸೋನಿಯಾ ಗಾಂಧಿ ಅವರ ವಿಚಾರಣೆ ಹಿನ್ನೆಲೆ ಗಾಂಧಿ ಕುಟುಂಬದಿಂದ ನಾವೆಲ್ಲಾ ಸಾಕಷ್ಟು ಪಡೆದುಕೊಂಡಿದ್ದೇವೆ. ಈಗ ನಾವು ಅವರ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಕುಮಾರ್, ಪ್ರತಿಭಟನೆಯಿಂದ ಸೋನಿಯಾಗಾಂಧಿಗೆ ಸಮಾಧಾನ ಆಗಬೇಕು. ನೈತಿಕವಾಗಿ ಸೋನಿಯಾಗಾಂಧಿಗೆ ಸಮಾಧಾನ ಸಿಗಬೇಕು. ಪ್ರಧಾನಿ ಹುದ್ದೆಯನ್ನೇ ಬಿಟ್ಟುಕೊಟ್ಟವರು ಸೋನಿಯಾ ಗಾಂಧಿ ಅವರು. ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಮಾಡಬೇಕಾ..? ನಾವು ಸೋನಿಯಾಗಾಂಧೀ ಬಟ್ಟಂಗಿಗಳಾಗಿ ಪ್ರತಿಭಟನೆ ನಡೆಸುತ್ತಿಲ್ಲ ಎಂದರು.
ನಾವು 3 ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ಋಣ ಸಂದಾಯ ಮಾಡುವ ಸಮಯ ಬಂದಿದೆ ಪ್ರತಿಭಟಿಸದಿದ್ರೆ ಅನ್ನದಲ್ಲಿ ಹುಳ ಬೀಳುತ್ತೆ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದರು.
ನಾನು ಯಾವಾಗಲೂ ನೇರವಾಗಿ ಹೇಳುತ್ತೇನೆ, ಮಾತನಾಡುತ್ತೇನೆ. ಗಾಂಧಿ ಕುಟುಂಬದಿಂದ ನಾವೆಲ್ಲಾ ಸಾಕಷ್ಟು ಪಡೆದುಕೊಂಡಿದ್ದೇವೆ ಇಂತಹ ಸಮಯದಲ್ಲಿ ನಾವು ಅವರ ಬೆನ್ನಿಗೆ ನಿಲ್ಲಬೇಕು. ಅವರಿಂದ ಅನುಕೂಲ ಪಡೆದುಕೊಂಡವರು ನಿಲ್ಲಬೇಕು. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರ ಬಲ ಕುಗ್ಗಿಸುವ ಯತ್ನ ನಡೆಯುತ್ತಿದೆ. ಹಾಗಾಗಿ ಕಾಂಗ್ರೆಸ್ ನವರೆಲ್ಲರೂ ಅವರ ಪರ ನಿಲ್ಲಬೇಕು ಎಂದರು.
Key words: congress-protest-sonia Gandhi-ED-Ramesh kumar