ಮಂಡ್ಯ,ಮೇ,10,2019(www.justkannada.in): ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತವೇ ಅಸಿಂಧುವಾಗಿದೆ.
ಹೌದು, ಗೌಪ್ಯತೆ ಕಾಪಾಡದ ಹಿನ್ನೆಲೆ ಮಂಡ್ಯ ಮೂಲದ ಸಿಆರ್ಪಿಎಫ್ ಯೋಧ ರಾಜನಾಯಕ್ ಎಂಬುವವರು ಅಂಚೆ ಮತದಾನ ಮೂಲಕ ಹಾಕಿದ್ದ ಮತವನ್ನ ಚುನಾವಣ ಆಯೋಗ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.
ಅಂಚೆ ಮತದಾನ ಮೂಲಕ ಸುಮಲತಾರಿಗೆ ಯೋಧ ರಾಜನಾಯಕ್ ಮತ ಹಾಕಿದ್ದರು. ತಾನು ಸುಮಲತಾ ಅವರಿಗೆ ವೋಟ್ ಹಾಕಿರುವುದನ್ನ ಸೆಲ್ಫಿ ತೆಗೆದು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದರು. ಹೀಗಾಗಿ ಮತದಾನದ ಗೌಪ್ಯತೆ ಕಾಪಾಡದ ಹಿನ್ನೆಲೆ ಯೋಧ ರಾಜನಾಯಕ್ ಹಾಕಿದ್ದ ಮತ ಅಸಿಂಧುವಾಗಿದೆ.
ಈ ಸಂಬಂಧ ಯೋಧನ ವಿರುದ್ದ ಏ. 10ರಂದು ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆ ಚುನಾವಣಾ ಆಯೋಗದಿಂದ ಯೋಧನ ಮತ ಅಸಿಂಧುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
Key words: Mandya- Independent candidate –Sumalatha- first- vote – Invalid