ಕೊಡಗು,ಆ,12,2019(www.justkannada.in): ಧಾರಾಕಾರ ಮಳೆ ಪ್ರವಾಹಕ್ಕೆ ನಲುಗಿದ್ದ ಕೊಡಗು ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಈ ಮಧ್ಯೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮಡಿಕೇರಿ –ವಿರಾಜಪೇಟೆ ರಸ್ತೆ ಮಾರ್ಗವನ್ನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಕಾರು, ಬೈಕ್ ಸೇರಿ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರಿ ಮಳೆಯಿಂದಾಗಿ ಮಡಿಕೇರಿ –ವಿರಾಜಪೇಟೆ ರಸ್ತೆ ಕೊಚ್ಚಿಹೋಗಿತ್ತು.
ಇದೀಗ ಸೀಮೆಂಟ್ ಮರಳು ಮೂಟೆಯನ್ನ ಇಟ್ಟು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೊಡಗಿನಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ.
Key words: Kodagu District – returning – normal-Open – Madikeri-Virajpet-Road