ಮೈಸೂರು,ಆ,13,2019(www.justkannada.in): ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯಲ್ಲಿ ರಜೆ ನೀಡಲಾಗಿತ್ತು. ಇದೀಗ ಪ್ರವಾಹ ತಣ್ಣಗಾದ ಹಿನ್ನೆಲೆ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ.
ಕಳೆದ ನಾಲ್ಕು ದಿನಗಳಿಂದ ಸರ್ಕಾರಿ ರಜೆ ಮಜೆಯಲ್ಲಿದ್ದ ವಿದ್ಯಾರ್ಥಿಗಳು ಇಂದಿನಿಂದ ಶಾಲಾ-ಕಾಲೇಜಿಗೆ ತೆರೆಳುತ್ತಿದ್ದಾರೆ. ಇನ್ನು ನೆರೆ ಪ್ರವಾಹ ಹಿನ್ನೆಲೆ ನಂಜನಗೂಡು, ಎಚ್.ಡಿ ಕೋಟೆ, ಟಿ.ನರಸಿಪುರಕ್ಕೆ ಇದರಿಂದ ವಿನಾಯ್ತಿ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ತಾಲ್ಲೂಕಿನ ಪರಿಸ್ಥಿತಿ ನೋಡಿ ಶಾಲಾ ಕಾಲೇಜುಗಳು ಪ್ರಾರಂಭ ಮಾಡಲಾಗಿದೆ. ಸಂಪರ್ಕ ಕಳೆದುಕೊಂಡಿರುವ ಕೆಲ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದ್ದು, ಸಂಪರ್ಕ, ಸಂಚಾರಕ್ಕೆ ಸೂಕ್ತವಾದ ಗ್ರಾಮಗಳ ಶಾಲೆಗಳು ಮಾತ್ರ ಪ್ರಾರಂಭವಾಗಿವೆ ಎಂದರು.
ನೆರೆ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳ ಪ್ರಾರಂಭ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆಯಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಡಿಡಿಪಿಐ, ಬಿಇಓ ಅವರ ವಿವೇಚನೆ ಬಿಡಲಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಪ್ರಾರಂಭವಾಗಿದೆ ಎಂದು ತಿಳಿಸಿದರು.
Key words: flood- Mysore District- School- Colleges- Started