ನವದೆಹಲಿ,ಆಗಸ್ಟ್,10,2022(www.justkannada.in): ಸಿಎಂ ಬದಲಾವಣೆ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಅಸ್ತ್ರ ಪ್ರಯೋಗಿಸಿದರೂ ಸಿಎಂ ಸಮರ್ಥನೆಗೆ ನಿಲ್ಲದ ಸಚಿವರ ವಿರುದ್ಧ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.
ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಿಎಂ ಬೊಮ್ಮಾಯಿ ಸಮರ್ಥಿಸಿಕೊಳ್ಳದ ಸಚಿವರು ನಾಲಾಯಕ್. ಸಂಘಟನೆ, ಸರ್ಕಾರ ಸಮರ್ಥಿಸಿಕೊಳ್ಳಬೇಕಿರುವುದು ಕರ್ತವ್ಯ. ಕೆಲವು ಸಚಿವರು ಈವರೆಗೆ ಬಾಯಿ ಬಿಡುತ್ತಿಲ್ಲ. ಇಂತಹ ಹೊತ್ತಲ್ಲಿ ಸಿಎಂ ಜತೆ ಎಲ್ಲಾ ಸಚಿವರು ನಿಲ್ಲಬೇಕು. ಆದರೆ ಕೆಲವರು ಬಿಟ್ಟು ಉಳಿದವರು ಸಿಎಂ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಪಕ್ಷ ಸಂಘಟನೆ ಪರ ನಿಲ್ಲಬೇಕು, ಮಾತಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆಯೇ ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಮುಂದಿನ ಅವಧಿಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ಬಸವರಾಜ ಬೊಮ್ಮಾಯಿ ಮತ್ತೆ ಸಿಎಂ ಆಗುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದರು.
Key words: MLA-MP Renukacharya-against – minister.