ನಮ್ಮವರು ಹೋಟೆಲ್ ನಲ್ಲಿ ಇರುತ್ತಿದ್ರು, ನಿಮ್ಮವರೇನು ಗುಡಿಸಲಿನಲ್ಲಿ ಇದ್ರಾ..? ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಸಾ.ರಾ ಮಹೇಶ್ ವಾಗ್ದಾಳಿ.

ಮೈಸೂರು,ಆಗಸ್ಟ್,12,2022(www.justkannada.in):  ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ದುಕೊಂಡೇ ಆಡಳಿತ ನಡೆಸಿದ್ದರು. ಅಳುವ ಬದಲಿಗೆ ಕೆಲಸ ಮಾಡಿ ತೋರಿಸಬೇಕು ಎಂದು ಟೀಕಿಸಿದ್ಧ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಅಶ್ವಥ್ ನಾರಾಯಣ್ ನನ್ನ ಒಳ್ಳೆಯ ಸ್ನೇಹಿತ. ನಾನು ಕೂಡ ಬಿಜೆಪಿಯಲ್ಲಿ ಇದ್ದವನು. ನಾನು ಇದ್ದ ವೇಳೆ ರಾಜ್ಯದ, ರಾಷ್ಟ್ರದ ನಾಯಕರು ಯಾವುದಾದರೂ ಒಬ್ಬ ಕಾರ್ಯಕರ್ತನ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ ಈಗ ಜಿಲ್ಲಾ ನಾಯಕರು ಕೂಡ ಉಳಿಯುತ್ತಿಲ್ಲ‌.ಸಮಿಶ್ರ ಸರ್ಕಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡಿದರು. ಮಾಜಿ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ಅಧಿಕೃತ ನಿವಾಸ ಬಿಡದೆ ಇದ್ದಿದ್ದ ಕಾರಣಕ್ಕೆ ‌ಮಧ್ಯಾಹ್ನ ಊಟಕ್ಕೆ ರೆಸ್ಟ್ ಗೆ ಹೋಟೆಲ್ ಗೆ ಹೊಗುತ್ತಿದ್ದರು.  ಮನೆಯಲ್ಲೂ ಇರಿಸೋದಕ್ಕೆ ಬಿಡೊದಿಲ್ಲ ಎನ್ನುತ್ತಿದ್ದರು. ನಮ್ಮವರು ಹೋಟೆಲ್ ನಲ್ಲಿ ಇರುತ್ತಿದ್ದರು. ಹಾಗಾದರೇ ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ..? ಬಾಂಬೆಯಲ್ಲಿ ಇದ್ದವರು ಗುಡಿಸಿಲಿನಲ್ಲಿ ಇದ್ದರಾ..?  ಅವರನ್ನೆಲ್ಲ ಬಾಂಬೆಯಲ್ಲಿ ಗುಡಿಸಿಲಿನಲ್ಲಿ ಇರಿಸಿದ್ರಾ? ಎಂದು ಕಿಡಿಕಾರಿದದರು.

ರಾಜಕಾರಣದಲ್ಲಿ ಟೀಕೆ‌ ಸಾಮಾನ್ಯ. ಆದರೆ, ತಪ್ಪು ಮಾಡಿದರೆ ಟೀಕಿಸಲಿ ಅದನ್ನ ಬಿಟ್ಟು ಈ ರೀತಿ ಟೀಕೆ ಸರಿಯಲ್ಲ. ವೈಯಕ್ತಿಕ ಜೀವನವೇ ಬೇರೆ, ಸಾರ್ವಜನಿಕ ಜೀವನವೇ ಬೇರೆ. ನಮ್ಮಲ್ಲಿ ಚೆನ್ನಾಗಿ ಮಾತನಾಡುವ ನಾಯಕರು ಇದ್ದಾರೆ. ಆದ್ರೆ ನಾವು ದೇವೇಗೌಡರ ಅಣತಿಯಂತೆ ಮಾತನಾಡುತ್ತೇವೆ. ನೀವು ಆರ್ ಅಶೋಕ್ ಅವ್ರ ಓವರ್ ಟೆಕ್ ಮಾಡ್ತಾ ಇದ್ದೀರಾ. ಸಮಿಶ್ರ ಸರ್ಕಾರ ಬೀಳಲು ನೀವು ಒಬ್ಬರು ಕಾರಣ. ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗದೆ ಇರುವುದಕ್ಕೆ ಈ ರೀತಿ ಪ್ಲಾನ್ ಮಾಡ್ತಾ ಇದ್ದೀರಾ. ಕುಮಾರಸ್ವಾಮಿ ಏನು..?  ನೀವು ಏನು ಅಂತಾ ಈ ನಾಡಿಗೆ ಗೊತ್ತಿದೆ ಎಂದು ಸಾ.ರಾ ಮಹೇಶ್ ಟಾಂಗ್ ನೀಡಿದರು.

ಮಾತನಾಡುವಾಗ ಇತಿ ಮಿತಿಯಲ್ಲಿ ಮಾತನಾಡಿ. ಉನ್ನತ ಶಿಕ್ಷಣ ಸಚಿವರಾಗಿ ಇದೇನಾ ನಿಮ್ಮ ಸಂಸ್ಕಾರ…? ನಿಮ್ಮ ಹಿರಿಯ ನಾಯಕರು ನಿಮಗೆ ಬುದ್ದಿ ಹೇಳಬೇಕಲ್ವಾ..? ಈಗಾಲೂ ಮನವಿ ಮಾಡಿ ಹೇಳುತ್ತಿದ್ದೇನೆ. ನಮ್ಮ ಭಾಷೆ ನಮ್ಮ ಸಂಸ್ಕಾರ ತೀರ್ಮಾನ ಮಾಡುತ್ತದೆ. ಈ ಹಿಂದೆ ಬಿಜೆಪಿ ಹೀಗೆ ಇರಲಿಲ್ಲ. ಬಿಜೆಪಿ ನಾಯಕರಿಗೆ ಮನವಿ ಮಾಡ್ತೀನಿ ಹೀಗೆ ಮಾತನಾಡುವವರಿಗೆ ಸಂಸ್ಕಾರ ಕಲಿಸಿ. ನೀವು ಮಾತನಾಡಿದ್ರಿ ಅಂತಾ ನಾವು ಮಾತನಾಡಲ್ಲ ಎಂದು ಸಾರಾ ಮಹೇಶ್ ಹರಿಹಾಯ್ದರು.

ಕುಮಾರಸ್ವಾಮಿ ಸ್ವಾಮಿ ಹೋಟೆಲ್ ವಾಸ್ತವ್ಯ ವಿಚಾರ ಒಂದೇ ಇರೋದು. ಮತ್ತೇನು ವಿಚಾರ ಇಲ್ವಲ್ವಾ ಕುಮಾರಸ್ವಾಮಿ ಮೇಲೆ ಮಾತನಾಡಲು. ಕುಮಾರಸ್ವಾಮಿ ಮೇಲೆ ಯಾವುದೇ ಹಗರಣ ಇಲ್ಲ, ಡಿನೋಟಿಫಿಕೇಷನ್ ಹಗರಣ ಇಲ್ಲ.

ಅಶ್ವಥ್ ನಾರಾಯಣ್ ಬಹಿರಂಗ ಚರ್ಚೆಗೆ ಬರಲಿ. ನನಗೆ ಸಿಗಲಿ ಹೇಳುತ್ತೇನೆ. ಉನ್ನತ ಶಿಕ್ಷಣ ಸಚಿವ ನೀನು ಯಾಕೆ ಹೀಗೆ ಆದೆ ಅಂತಾ ಕೇಳ್ತೀನಿ. ಜಿಲ್ಲೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರಿಂದ ಬೆಳೆದ ಅನೇಕ ನಾಯಕರು ನಾವು ಇದ್ದೀವಿ‌ ಎಂದು ಸಾ.ರಾ ಮಹೇಶ್ ಹೇಳಿದರು.

ರಾಜ್ಯದಲ್ಲಿ ಮಳೆ ಹೆಚ್ಚಾಗಿ ಮನೆಗಳು ಬೀಳುತ್ತಿವೆ. ಇಂತಹ ವೇಳೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹಿತೈಷಿಗಳು ಹೇಳಿದ್ರು. ನಾನು ಮೂರು ದಿನ ಹೊರಗೆ ಇದ್ದೆ ಎಂದು ಹುಟ್ಟುಹಬ್ಬ ಆಚರಿಸಿಕೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿದರು.

Key words: JDS-MLA-SA.RA Mahesh-minister-ashwath narayan