ಬೆಂಗಳೂರು,ಆಗಸ್ಟ್,24,2022(www.justkannada.in): ಗುತ್ತಿಗೆದಾರರಿಗೆ 13 ಸಾವಿರ ಕೊಟಿ ಬಿಲ್ ಬಾಕಿ ಇದೆ ಹೀಗಾದ್ರೆ ಗುತ್ತಿಗೆದಾರರ ಪರಿಸ್ಥಿತಿ ಏನು..? ಇದೊಂದು ಕೆಟ್ಟ ಸರ್ಕಾರ, 40 ಪರ್ಸೆಂಟ್ ಸರ್ಕಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕಿಡಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಗುತ್ತಿಗೆದಾರರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೇ ಬಿಲ್ ಪಾವತಿಸದೇ ಹೊಸ ಟೆಂಡರ್ ಕರೆಯುತ್ತಾರೆ. ಟೆಂಡರ್ ಕರೆಯೋದು 40 ಪರ್ಸೆಂಟ್ ಕಮಿಷನ್ ಗೋಸ್ಕರ. ಗುತ್ತಿಗೆದಾರರಿಗೆ 12 ಸಾವಿರ ಕೊಟಿ ಬಿಲ್ ಬಾಕಿ ಇದೆ. ಹೀಗಾದರೇ ಗುತ್ತಿಗೆದಾರರ ಪರಿಸ್ಥಿತಿ ಏನಾಗುತ್ತದೆ. ಸಂತೋಷ್ ಪಾಟೀಲ್ ತರ ಘಟನೆಗಳು ನಡೆಯುತ್ತವೆ ಎಂದು ಆರೋಪಿಸಿದರು.
ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ಇದ. ಆದರೂ ಸಚಿವರ ಮೇಲೆ ಯಾಕೆ ಇಡಿ, ಐಟಿ ದಾಳಿ ಆಗಿಲ್ಲ ರಾಜ್ಯ ಕೇಂದ್ರ ಸರ್ಕಾರದಿಂದ ವಾತಾವರಣ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾನು ಸಮಾಜವನ್ನ ಕೂಡಿಸುವ ವಿಚಾರ ಮಾತ್ರ ಮಾತನಾಡುತ್ತೇನೆ. ನಾವು ಕೂಡುವುದು ಇಷ್ಟ ಇಲ್ವಾ ನಿಮಗೆ..? ಎಲ್ಲಾ ಲಿಂಗಾಯತ ಉಪಪಂಗಡಗಳಿಗೆ ಒಳ್ಳೆಯದಾಗಬೇಕು ಚುನಾವಣೆ ಬಳಿಕ ಎಲ್ಲಾ ಶ್ರೀಗಳನ್ನ ಸೇರಿಸಿ ಚರ್ಚೆ ಮಾಡುತ್ತೇವೆ ಎಂದು ಎಂಬಿ ಪಾಟೀಲ್ ತಿಳಿಸಿದರು.
Key words: 13,000 crore- bill -due –contractors- M. B. Patil