ಮೈಸೂರು,ಆಗಸ್ಟ್,2022(www.justkannada.in): ಹುಂಡಿ ಕಾಸಿಗೂ ಡಿಜಿಟಲ್ ವ್ಯವಸ್ಥೆ ಲಗ್ಗೆ ಇಟ್ಟಿದ್ದು, ಇದೀಗ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇ-ಹುಂಡಿ ಪ್ರಾರಂಭ ಮಾಡಲಾಗಿದೆ.
ಮುಜರಾಯಿ ಇಲಾಖೆ, ಕರ್ನಾಟಕ ಬ್ಯಾಂಕ್ ಸಹಯೋಗದಲ್ಲಿ ಜಾರಿ ಮಾಡಲಾಗಿದ್ದು ಗೂಗಲ್ ಪೇ, ಫೋನ್ ಪೇ, ಬೀಮ್, ಪೇಟಿಎಂ ಸೇರಿದಂತೆ ಯಾವುದೇ ಆ್ಯಪ್ನಿಂದ ಕಾಣಿಕೆ ಸಲ್ಲಸಲು ಅವಕಾಶ ನೀಡಲಾಗಿದೆ. ಹುಂಡಿ, ಭಕ್ತರ ಸರತಿ ಸಾಲುಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿ ಕಾಣಿಕೆ ಅರ್ಪಿಸಲು ಅವಕಾಶ. ನೀಡಲಾಗಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿ ಮಾಡಲಾಗುತ್ತಿದೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಮೊದಲ ಬಾರಿಗೆ ಜಾರಿ ಮಾಡಲಾಗಿದ್ದು, ಚಾಮುಂಡೇಶ್ವರಿ ಸಮೂಹ ದೇವಾಲಯಗಳಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಬಹುದಾಗಿದೆ.
ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು. ಈಗಾಗಿ ಇ- ಹುಂಡಿ ಸ್ಥಾಪನೆ ಮಾಡಲಾಗಿದೆ ಈ ಬಾರಿಯ ಆಷಾಡ ಮಾಸದಲ್ಲಿಯೂ ಕ್ಯೂ ಆರ್ ಕೋಡ್ ಬೇಡಿಕೆ ಹೆಚ್ಚಾಗಿತ್ತು. ವಿವಿಧ ರಾಜ್ಯದ ಭಕ್ತರಿಗೆ ಅನುಕೂಲ ವಾಗುವ ರೀತಿ ಇ-ಹುಂಡಿ ಸ್ಥಾಪನೆ ಮಾಡಲಾಗಿದೆ ಎಂದು ಚಾಮುಂಡಿ ಬೆಟ್ಟದ ಪ್ರಭಾರ ಇಓ ಕೃಷ್ಣ ಹೇಳಿದ್ದಾರೆ.
Key words: Digital Hundi – Chamundi Hill-mysore