ಮೈಸೂರು,ಆಗಸ್ಟ್,26,2022(www.justkannada.in): ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಸಂಬಂಧ, ಆರು ತಿಂಗಳ ಕಾಲ ನೀವು ಸರ್ಕಾರಿ ಟೆಂಡರ್ ಗುತ್ತಿಗೆ ಬಾಯ್ಕಾಟ್ ಮಾಡಿ. ಸರ್ಕಾರಿ ಟೆಂಡರ್ ಗುತ್ತಿಗೆ ನಿಲ್ಲಿಸಿ. ಆವಾಗ ಎಲ್ಲರಿಗೂ ಇದೊಂದು ಪಾಠ ಆಗಲಿದೆ ಎಂದು ಗುತ್ತಿಗೆದಾರರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಹಳ್ಳಿ ಹಳ್ಳಿಗಳಲ್ಲೂ ಕೂಡ ಈವಾಗ ಗುತ್ತಿಗೆದಾರರು ಹುಟ್ಟಿಕೊಂಡಿದ್ದಾರೆ.ಕೆಲಸವನ್ನೇ ಮಾಡದೆ ಹಲವರು ದುಡ್ಡು ಹೊಡೆಯುತ್ತಿದ್ದಾರೆ. ಬಿಜೆಪಿ ಬಂದಾಗಲೆ ಎಲ್ಲವೂ ಕುಲಗೆಟ್ಟು ಹೋಗಿದೆ ನಿಮಗೆ ಯಾವ ಸಾಕ್ಷಿ ಬೇಕು? ನಿಮಗೆ ಆತ್ಮಸಾಕ್ಷಿ ಇಲ್ಲವೇ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು,.
ನಾನು ಸಿಎಂ ಆಗಿದ್ದಾಗ ಲಾಟರಿ ನಿಷೇಧಕ್ಕೆ ವಿರೋಧವಿತ್ತು. ಅದಕ್ಕಾಗಿ ಎಷ್ಟೆಲ್ಲ ಆಫರ್ ನೀಡಿದ್ದರು. ನಾನು ಅದನ್ನ ತಿರಸ್ಕರಿಸಿ ಮಾಡಿದ್ದೆ. ಅವರೆಲ್ಲರನ್ನೂ ಜೈಲಿಗೆ ಕಳುಹಿಸುವ ಉದ್ದೇಶ ಈಗಲೂ ಇಲ್ಲ. ಎರಡೂ ಪಕ್ಷಗಳಲ್ಲೂ ಕೂಡ ಭ್ರಷ್ಟಾಚಾರ ನಡೆದಿದೆ. ನಾನು ಸಿಎಂ ಆಗಿದ್ದಾಗ ಪ್ರತಿ ತಿಂಗಳು ನೇರವಾಗಿ ಗುತ್ತಿಗೆದಾರರಿಗೆ ಹಣ ಹೋಗುತ್ತಿತ್ತು. ನಾನು ಸಿಎಂ ಆಗಿದ್ದಾಗ 46 ಮಂದಿ ಎಂಜಿನಿಯರ್ ಗೆ ಪ್ರಮೋಷನ್ ನೀಡಿದೆವು. ನಮಗೆ ಒಂದು ಗ್ಲಾಸ್ ನೀರು ನೀಡಿಲ್ಲ. ಒಂದು ರೂಪಾಯಿ ಪಡೆದಿಲ್ಲ ನಾವು ಯಾವ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ಲ ನಾವು ಯಾರಿಗೂ ಒತ್ತಡ ಹೇರಿಲ್ಲ. ಯಾರ ಬಳಿಯೂ ಚಂದ ಎತ್ತಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಹೆಚ್.ಡಿಕೆ, ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ. ಅರ್ಕಾವತಿ ಬಗ್ಗೆ ಭ್ರಷ್ಟಾಚಾರ ಮಾಡಿದ್ದಾರೆ.ಕೆಂಪಣ್ಣ ವರದಿ ಎಲ್ಲಿಗೆ ಹೋಯ್ತು ಈವಾಗ ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ.ಎಷ್ಟು ನ್ಯಾಯಾಂಗ ತನಿಖೆ ನಡೆಸಿ ಶಿಕ್ಷೆ ಆಗಿದೆ. ಇದಕ್ಕೆ ಎಂದಿಗೂ ಕೊನೆಯಿಲ್ಲ. ಒಬ್ಬರು ಹೊಡೆದಂಗೆ ಮಾಡು, ಒಬ್ಬರು ಅತ್ತಂಗೆ ಮಾಡು ಅನ್ನೋ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಬಿಐನ ಅಧಿಕಾರಿಗಳು ಅನುಮತಿ ಇಲ್ಲದೆ ಬಂದಿರುವ ಕಾರಣ ವಜಾಗೊಂಡಿದೆ. ಇದು ತಾಂತ್ರಿಕ ದೋಷಗಳಿಂದ ಆಗುವ ಲೋಪ. 40% ಕಮೀಷನ್ ಪೊಲಿಟಿಕಲ್ ತಿರುವು ಪಡೆಯಿತಾ?.ನಾವು ಆಡಳಿತದಲ್ಲಿದ್ದಾಗ ನಮ್ಮ ಶಾಸಕರು ಭ್ರಷ್ಟಾಚಾರ ಮಾಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಆ ಭ್ರಷ್ಟಾಚಾರದಲ್ಲಿ ನಮ್ಮವರು ಇರಲಿಲ್ಲ ಎಂದು ಹೆಚ್.ಡಿಕೆ ಹೇಳಿದರು.
ಮುನಿರತ್ನ ಮೂಲ ಗುತ್ತಿಗೆದಾರ. ಸಂತೋಷ್ ಹೆಗ್ಡೆ ನ್ಯಾಯಮೂರ್ತಿ ಆಗಿದ್ದಾಗ ಗೋಡೆ ಕುಸಿದು ಮಗು ಸತ್ತಿತ್ತು. ಆ ಪ್ರಕರಣದಲ್ಲಿ ಯಾರಿಗೆ ಶಿಕ್ಷೆ ನೀಡಿದ್ರಿ? ಸಿದ್ದರಾಮಯ್ಯ ಅವರ ಕಾಲದಲ್ಲಿ ಪರ್ಸಂಟೇಜ್ ಎಷ್ಟಿತ್ತು ಗೊತ್ತಿತ್ತು. ಮೂರು ಜನ ಬಿಟ್ಟು ಹೋದವರಿಗೆ ಹಣ ಹೋಗ್ತಾ ಇತ್ತು. ಕುಮಾರಸ್ವಾಮಿ ಸರ್ಕಾರ ಉರುಳಿಸಲು ಇದೇ ಕಾರಣ ಎಂದು ಹೆಚ್.ಡಿಕೆ ಆರೋಪಿಸಿದರು.
ಡಿಕೆಶಿ- ಎಚ್ ಡಿಕೆ ನಡುವೆ ಏನೋ ಹೊಂದಾಣಿಕೆ ಆಗಿದೆ ಸುಳ್ಳು. ಕೆಂಪೇಗೌಡ ಜಯಂತಿ ಕಾರ್ಯಕ್ರಮ ಹಿನ್ನೆಲೆ ಜೊತೆಗೂಡುತ್ತಿದ್ದೇವೆ. ಅವರು ಒಂದು ಪಕ್ಷದ ಅಧ್ಯಕ್ಷರು. ನಾನು ಒಂದು ಪಕ್ಷದ ಅಧ್ಯಕ್ಷರಿದ್ದೇವೆ. ನಮಗೆ ಅವರ ಮೇಲೆ ಸಿಂಪತಿಯಲ್ಲ. ಭಗವಂತ ಹೇಗೆ ದಾರಿ ತೋರುತ್ತಾನೆ ಹಾಗೆ ಎಂದು ನುಡಿದರು.
Key words: Boycott –government- tender- contract -six months- HDK