ಬೆಂಗಳೂರು,ಸೆಪ್ಟಂಬರ್,8,2022(www.justkannada.in): ಸೆಪ್ಟಂಬರ್ 10 ರಂದು ನಿಗದಿಯಂತೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಂದೆ ಹೋಗಲ್ಲ ಎಂದು ಆರೋಗ್ಯ ಸಚಿವ ಡಾಕೆ.ಸುಧಾಕರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಅನಿವಾರ್ಯ ಕಾರಣಗಳಿಂದ ಜನಸ್ಪಂದನ ಮುಂದೂಡಲಾಯಿತು. ಜುಲೈ 28 ರಂದು ನಮ್ಮ ಕಾರ್ಯಕರ್ತರ ಕೊಲೆಯಾಯಿತು. ಸೆಪ್ಟಂಬರ್ 6 ರಂದು ಉಮೇಶ್ ಕತ್ತಿ ನಿಧನರಾದ್ದರು. ಶೋಕದ ಕ್ಷಣದಲ್ಲಿ ಕಾರ್ಯಕ್ರಮ ಮಾಡುವುದು ಸರಿ ಅಲ್ಲ. ಸೆಪ್ಟಂಬರ್ 10ಕ್ಕೆ ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ ಎಂದರು.
ಜನಸಪ ಕಾಂಗ್ರಸ್ಜನಸ್ನೇಹಿ ಎಂಬ ಪದವೇ ಗೊತ್ತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವ್ಯತ್ಯಸವಿದೆ. ನಮ್ಮ ಸಂಘಟನೆ ಎಲ್ಲಿ ಕಡಿಮೆ ಇದೆ ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ. ನಾವು ಏನ್ಮಾಡಿದ್ದೇವೆ ಎಂದು ತೋರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ನವರು ಕೂಡ ಆತ್ಮಾವಲೋಕನ ಮಾಡಿಕೊಳ್ಳಲಿ ಅವರ ಕಾರ್ಯಕ್ರಮ ಚೆನ್ನಾಗಿದ್ರೆ ಏಕೆ ಸೋಲುತ್ತಿದ್ದರು. ಯಾಕೆ ಕಾಂಗ್ರೆಸ್ ನ 50ಕ್ಕೂ ಹೆಚ್ಚು ಶಾಸಕರು ಸೋತರು. ಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮಳೆ ಬಂದಾಗ ನಾವು ಜನರ ಜತೆ ಇದ್ದೇವೆ. ಸ್ಥಳ ಪರಿಶೀಲನೆ ಮಾಡಿದ್ದೇವೆ ಕಾಂಗ್ರೆಸ್ ನಿಂದ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
Key words: Janaspandana- 10th September -Minister -Sudhakar.