ಮೈಸೂರು,ಸೆಪ್ಟಂಬರ್,9,2022(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಇಂದು ತೂಕ ಹಾಕುವ ಪ್ರಕ್ರಿಯೆ ನಡೆದಿದ್ದು, ಮೊದಲ ತಂಡದಲ್ಲಿ ಆಗಮಿಸಿದ ಆನೆಗಳ ತೂಕವು ನಡೆಯಿತು
ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್ ನಲ್ಲಿ ಅಂದರೆ ಲಾರಿಗಳಿಗೆ ತೂಕ ಹಾಕುವ ವೇವ್ ಬ್ರಿಡ್ಜ್ ನಲ್ಲಿ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ. ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5885 ಕೆ.ಜಿ ತೂಕ ಹೊಂದಿದ್ದಾನೆ. ಬಂದಾಗ 5775 ಕೆ ಜಿ ತೂಕವಿದ್ದನು.
ಬಂದಾಗ 4770 ಕೆ ಜಿ ತೂಕವಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಇದೀಗ 5000 ಕೆ ಜಿ ತೂಕ ಹೊಂದಿದ್ದಾನೆ. ಚೈತ್ರಾ ಆನೆಯ ತೂಕ 3235 ಕೆ ಜಿ ತೂಕ. ಬಂದಾಗ 3050 ಕೆ ಜಿ ತೂಕವಿತ್ತು.
ಬಂದಾಗ 3920 ಕೆ ಜಿ ತೂಕವಿದ್ದ ಭೀಮ 4345 ಕೆ ಜಿ ತೂಕ ಹೊಂದಿದ್ದಾನೆ. ಹಾಗೆಯೇ ಮಹೇಂದ್ರ 4450 ಕೆ ಜಿ ತೂಕ ಹೊಂದಿದ್ದು ಬಂದಾಗ 4250 ಕೆ ಜಿ ತೂಕವಿದ್ದನು. ವಿಜಯ 2760 ಕೆ ಜಿ, ಗೋಪಿ 4670 ಕೆ. ಜಿ, ಪಾರ್ಥಸಾರಥಿ 3445 ಕೆ ಜಿ ತೂಕ ಹೊಂದಿದ್ದಾನೆ.
ಇನ್ನು ಬಂದಾಗ 4810 ಕೆ ಜಿ ತೂಕವಿದ್ದ ಧನಂಜಯ 4890 ಕೆ. ಜಿ ತೂಕ ಹೊಂದಿದ್ದಾನೆ. ಶ್ರೀರಾಮ 4475 ಕೆ. ಜಿ, ಸುಗ್ರೀವ 4785 ಕೆ. ಜಿ ತೂಕವಿದೆ. ಬಂದಾಗ 2920 ಕೆ ಜಿ ತೂಕವಿದ್ದ ಲಕ್ಷ್ಮಿ 3150 ಕೆ ಜಿ ತೂಕವಿದೆ. ಕಾವೇರಿ 3245 ಕೆ ಜಿ ತೂಕ. ಬಂದಾಗ 3105 ಕೆ ಜಿ ತೂಕವಿತ್ತು. ಗೋಪಾಲಸ್ವಾಮಿ 5460 ಕೆ ಜಿ ತೂಕ. ಬಂದಾಗ 5140 ಕೆ ಜಿ ತೂಕವಿತ್ತು ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಒಟ್ಟು ಸೇರಿ 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ, ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಸಾವಿರ ಕೆಜಿ ವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ 3445 ತೂಕ ಹೊಂದಿದೆ, ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದರು.
ಈ ದಿನ ಮೊದಲನೇ ಬಾರಿಗೆ ಎಲ್ಲ 14 ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತಂದಿದ್ದು, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
Key words: Mysore Dasara-Arjuna – stronger -weight