ದೊಡ್ಡಬಳ್ಳಾಪುರ,ಸೆಪ್ಟಂಬರ್,9,2022(www.justkannada.in): ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನಸ್ಪಂದನ ಸಮಾವೇಶಕ್ಕೆ ಅಗತ್ಯ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಸಂಕಷ್ಟದ ಸಮಯದಲ್ಲೂ ಜನರಿಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಅದಕ್ಕಾಗಿಯೇ ಜನಸ್ಪಂದನ ಸಮಾವೇಶ ಎಂದು ಹೆಸರಿಟ್ಟಿದ್ದೇವೆ. ಜನರ ಉತ್ಸವ ಆಗಬೇಕೆಂದು ಜನೋತ್ಸವ ಎಂದು ಹೆಸರು ಇಟ್ಟಿದ್ಧವು. ಅತಿವೃಷ್ಠಿ ಹಿನ್ನೆಲೆ ಉತ್ಸವ ಬೇಡ ಎಂದು ಜನಸ್ಪಂದನ ಹೆಸರಿಟ್ಟಿದ್ದೇವೆ. ಆ ಭಾಗದಲ್ಲಿ 7 ರಿಂದ 8 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ನುಡಿದರು.
10 ಎಕರೆ ಪ್ರದೇಶದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ. 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಪಲಾವ್, ಮೊಸರನ್ನ ಸ್ವೀಟ್ ಇರಲಿದೆ. ತಾತ್ಕಾಲಿಕವಾಗಿ ಅಡುಗೆ ಮನೆ ನಿರ್ಮಾಣ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಎಲ್ಲೂ ಕೂಡ ಟ್ರಾಫಿಕ್ ಜಾಮ್ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2ವರ್ಷ ಬಿಎಸ್ ವೈ 1 ವರ್ಷ ಬೊಮ್ಮಾಯಿ ಆಡಳಿತ ಸೇರಿ ಮೂರು ವರ್ಷದ ನಮ್ಮ ಆಡಳಿತದ ಯೋಜನೆಗಳ ಮಾಹಿತಿ ಇಡ್ತೇವೆ. ಒಟ್ಟು ಆರು ಕಡೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ದೊಡ್ಡಬಳ್ಳಾಪುರದಲ್ಲಿ ನಾಳೆ ಕಾರ್ಯಕ್ರಮ ನಡೆಯಲಿದ್ದು ಇಲ್ಲಿ ಕೂಡ ನಮ್ಮ ಆಡಳಿತದ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತೇವೆ. ದೊಡ್ಡಬಳ್ಳಾಪುರ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದರು.
Key words: bjp-janaspandana- administration – people-Minister -Dr. K. Sudhakar