ದೊಡ್ಡಬಳ್ಳಾಪುರ,ಸೆಪ್ಟಂಬರ್,10,2022(www.justkannada.in): ಮೂರು ವರ್ಷದ ಸಾಧನೆ ಅನಾವರಣಗೊಳಿಸುವ ಸಲುವಾಗಿ ಇಂದು ರಾಜ್ಯ ಬಿಜೆಪಿ ಜನಸ್ಪಂದನ ಕಾರ್ಯಕ್ರಮವನ್ನ ಆಯೋಜಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶ ನಡೆಯುತ್ತಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆಯಲ್ಲಿ 30 ನಾಯಕರಿಗೆ ವ್ಯವಸ್ಥೆ ಮಾಡಲಾಗಿದ್ದು, 200 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳು ಕೇಸರಿಮಯವಾಗಿವೆ .
ಬೆಂಗಳೂರು ಗ್ರಾಮಾಂತರ ಎಸ್.ಪಿ ಬಾಲದಂಡಿ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದ್ದು ಇಬ್ಬರು ಎಎಸ್ ಪಿ, 11 ಡಿವೈಎಸ್ ಪಿ, 35 ಇನ್ಸ್ ಪೆಕ್ಟರ್, 100 ಪಿಎಸ್ ಐ 150 ಎಎಸ್ ಐ, 400 ಗೃಹ ರಕ್ಷಕ ದಳದ ಸಿಬ್ಬಂದಿಗಳು, 4 ಕೆಎಸ್ ಆರ್ ಪಿ ತುಕಡಿ, 6 ಡಿಎಆರ್ ತುಕಡಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಜುಲೈ 28 ರಂದು ನಡೆಯಬೇಕಿದ್ಧ ಜನೋತ್ಸವ ಕಾರ್ಯಕ್ರಮ ಸೆಪ್ಟಂಬರ್ 8ಕ್ಕೆ ಮುಂದೂಡಲಾಗಿತ್ತು. ಆದರೆ ಸಚಿವ ಉಮೇಶ್ ಕತ್ತಿ ನಿಧನರಾದ ಹಿನ್ನೆಲೆ ಮತ್ತೆ ಸಮಾವೇಶವನ್ನು ಮುಂದೂಡಿ ಜನಸ್ಪಂದನ ಹೆಸರಿನಲ್ಲಿ ಇಂದು ಕಾರ್ಯಕ್ರಮ ಮಾಡಲಾಗುತ್ತಿದೆ.
Key words: Today – Janaspandana-BJP – three years -achievements.