ಬೆಂಗಳೂರು, ಸೆಪ್ಟೆಂಬರ್ 15, 2022 (www.justkannada.in): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯುವ ದಾರಿ ಸುಗಮವಾಗಿದೆ.
ಬಿಸಿಸಿಐ ನಿಯಮಾವಳಿ ತಿದ್ದುಪಡಿಗೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಒಂದು ಅವಧಿ (3 ವರ್ಷ) ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಕೂಲಿಂಗ್ ಆಫ್ ಅವಧಿ ರದ್ದತಿ ಕುರಿತ ಬಿಸಿಸಿಐ ಮನವಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರ ನ್ಯಾಯಪೀಠ ಸ್ವೀಕರಿಸಿದೆ.
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಆರು ವರ್ಷ ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಮಾತ್ರ ಕೂಲಿಂಗ್ ಆಫ್ ಅವಧಿ ನಿಯಮ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂರು ವರ್ಷಗಳ ಅಧಿಕಾರ ಅವಧಿ ಮುಗಿದ ನಂತರ ಕೂಲಿಂಗ್ ಆಫ್ ಅವಧಿ ಅನ್ವಯಿಸಲಿದೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.