ಮೈಸೂರು ವಿವಿ: ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.

ಮೈಸೂರು:,ಸೆಪ್ಟಂಬರ್,19,2022(www.justkannada.in):  2022-23ನೇ ಶೈಕ್ಷಣಿಕ ಸಾಲಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಅಧ್ಯಯನ ವಿಭಾಗಗಳು/ ಸ್ನಾತಕೋತ್ತರ ಕೇಂದ್ರಗಳು/ಘಟಕ ಕಾಲೇಜುಗಳು ಸಂಯೋಜಿತ ಕಾಲೇಜುಗಳಲ್ಲಿ ನಡೆಸುವ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶಾತಿ ಪರೀಕ್ಷೆಯು ಎಲ್ಲಾ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ (ವಿದೇಶಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಕಡ್ಡಾಯವಾಗಿರುತ್ತದೆ. ಪ್ರತಿ ಕೋರ್ಸಿಗೂ ಅಭ್ಯರ್ಥಿಯು ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಗೆ ಹಾಜರಾಗಬೇಕು.

ಯಾವ ವಿಷಯ?: ಪ್ರಾಣಿಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಜೈವಿಕ ತಂತ್ರಜ್ಞಾನ, ಸೂಕ್ಷ್ಮಜೀವಶಾಸ್ತ್ರ, ತಳಿಶಾಸ್ತ್ರ, ರೇಷ್ಮೆ, ಕೃಷಿ ಮತ್ತು ರೇಷ್ಮೆ ಜೈವಿಕ ತಂತ್ರಜ್ಞಾನ, ಜೀವರಸಾಯನಶಾಸ್ತ್ರ, ಅಣು ಜೀವಶಾಸ್ತ್ರ, ಅಂಬೇಡ್ಕರ್ ಅಧ್ಯಯನ, ಬುದ್ಧ ಅಧ್ಯಯನ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಸಹಕಾರ ನಿರ್ವಹಣೆ, ಅಭಿವೃದ್ಧಿ ಅಧ್ಯಯನ, ದಕ್ಷಿಣ ಭಾರತೀಯ ಅಧ್ಯಯನ, ಭಾಷಾವಿಜ್ಞಾನ, ಅಂತರಾಷ್ಟ್ರೀಯ ಸಂಬಂಧಗಳು, ತತ್ವ ಶಾಸ್ತ್ರ, ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ, ಜಾನಪದ, ಜೈನಶಾಸ್ತ್ರ ಮತ್ತು ಪ್ರಾಕೃತ, ಪಾಶ್ಚಿಮಾತ್ಯ ಏಷಿಯಾದ ಅಧ್ಯಯನ, ಶಾಂತಿ ಮತ್ತು ಘರ್ಷಣೆಯ ನಿರ್ಣಯ, ಮಹಿಳಾ ಅಧ್ಯಯನ, ಗ್ರಾಮೀಣ ಅಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಇವುಗಳ ಜೊತೆಗೆ ಎಂ.ಕಾಂ, ಎಂ.ಕಾಂ(ಹಣಕಾಸು ಸೇವೆ), ಎಂ.ಎಸ್ಸಿ, ರಸಾಯನಶಾಸ್ತ್ರ/ಸಾವಯವ ರಸಾಯನಶಾಸ್ತ್ರ, ಎಂ.ಎಸ್ಸಿ, ಎಂ.ಎ. ಮಾನವಶಾಸ್ತ್ರ, ಎಂ.ಎಸ್ಸಿ ಭೂವಿಜ್ಞಾನ/ ಆನ್ವಯಿಕ ಭೂವಿಜ್ಞಾನ/ ಭೂವಿಜ್ಞಾನ ಮತ್ತು ವಿಪತ್ತು ನಿರ್ವಹಣೆಗಳಿಗೆ ಪರೀಕ್ಷೆ ಇರಲಿದೆ.

ಮೇಲಿನ ಗುಂಪಿನಲ್ಲಿ ಸೇರ್ಪಡೆಯಾಗದಿರುವ ಕೋರ್ಸುಗಳಿಗೆ ವಿದ್ಯಾರ್ಥಿಗಳು ಪ್ರತ್ಯೇಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬೇಕು, ಎಂ.ಬಿ.ಎ., ಎಂ.ಸಿ.ಎ, ಎಂ.ಟೆಕ್ ಡೇಟಾ ವಿಶ್ಲೇಷಣೆ ಮತ್ತು ಕಲಿಕೆ ಕೋರ್ಸುಗಳಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಸಂಪರ್ಕಿಸಲು ಸೂಚಿಸಿದೆ.

ಯಾವುದೇ ಪಿ.ಜಿ, ಪದವಿ ಕೋರ್ಸುಗಳ ಪ್ರವೇಶಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ನಡೆಸುವ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು 50 ಅಂಕಗಳಿಗೆ ಕನಿಷ್ಠ 10 ಅಂಕಗಳು (ಎಸ್ಸಿ/ಎಸ್ಟಿ/ವರ್ಗ-1 ಆಗಿದ್ದಲ್ಲಿ ಕನಿಷ್ಠ 05 ಅಂಕಗಳು; ಒಬಿಸಿ ಆಗಿದ್ದಲ್ಲಿ ಕನಿಷ್ಠ 09 ಅಂಕಗಳು) ಪಡೆದವರು ಮಾತ್ರ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ.

ವಿದೇಶಿ ವಿದ್ಯಾರ್ಥಿಗಳು ಅರ್ಜಿಯ ಸಲ್ಲಿಕೆ ಮತ್ತು ಪ್ರವೇಶದ ವಿವರಣೆಗೆ (http://internationalcenter.uni-mysore.ac.in) ವೆಬ್ಸೈಟ್ ನೋಡಬಹುದು.

Key words: Mysore University-Invitation – Application- Invitation-Entrance -exam

ENGLISH SUMMARY…

UoM: Applications invited for entrance test
Mysuru, September 19, 2022 (www.justkannada.in): Applications invited from eligible candidates for the entrance test held for various post graduate courses in the colleges/ postgraduate centers/ research departments of the University of Mysore.
Entrance test has been mandatory for all the post graduate courses (except foreign students). Candidates should separate applications for each course and appear for the entrance test.
Entrance test for these courses will be conducted: Zoology, Applied Zoology, Botany, Bio-Technology, Microbiology, Genetics, Sericulture, Agriculture and Silk Bio-technology, Bio-Chemistry, Molecular Biology, Ambedkar Research, Buddha Research, Social Justice and Empowerment, Cooperation Management, Development Research, South Indian Research, Linguistic Science, International Relationships, Philosophy, Comparative Literature, Peace and Conflict Resolution, Women Research, Rural Development, Tribal Development, Library and Information Science subjects.
Along with this entrance test for M.Com, M.Com (Financial Services), M.Sc., Chemistry/ Organic Chemistry, M.Sc., M.A. Anthropology, M.Sc. Geology/ Applied Geology/ Geology and Disaster Management.
Students who do not come under the above courses should write separate entrance test. Students who are aspiring to enrol for MBA, MCA, M.Tech, Data Analysis and Learning courses are requested to contact the Karnataka Examinations Authority.
Students who want to enrol for any of the PG and degree courses conducted by the University of Mysore should score a minimum of 10 marks in the entrance test out of the total 50 marks (for SC/ST/Category-1 05 marks; OBC-09 marks).
Foreign students can visit the website to know more about submission of application and admissions (http://internationalcenter.uni.mysore.ac.in).
Keywords: University of Mysore/ PG/ Degree courses/ entrance test