ಮೈಸೂರು,ಸೆಪ್ಟಂಬರ್,20,2022(www.justkannada.in): ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಸೆಪ್ಟಂಬರ್ 21ರಂದು ಅಸೋಸಿಯೇಷನ್ ಆಫ್ ಮೈಕ್ರೋಬಯಾಲಜಿಸ್ಟ್ಸ್ ಆಫ್ ಇಂಡಿಯಾದ 62ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯ, ಸಿಎಸ್ ಐ ಆರ್-ಸಿಎಫ್ ಟಿಆರ್ ಐ-ಡಿಆರ್ ಡಿಒ-ಡಿಎಫ್ ಆರ್ ಎಲ್, ಕೆಎಸ್ ಟಿಎ ಮತ್ತು ಜೆಎಸ್ ಎಸ್ ಅಹೇರ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ “ಸೂಕ್ಷ್ಮಜೀವಿಗಳು ಮತ್ತು ಸಮಾಜ: ಪ್ರಸ್ತುತ ಪ್ರವೃತ್ತಿಗಳು ಮತ್ತು ಭವಿಷ್ಯದ ನಿರೀಕ್ಷೆಗಳು (MSCTFP-2022)” ಎಂಬ ವಿಷಯದ ಬಗ್ಗೆ ಉಪನ್ಯಾಸವೂ ಇರಲಿದೆ.
ಪದ್ಮಶ್ರೀ, ಬೆಂಗಳೂರು ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ , ಪದ್ಮಶ್ರೀ ಪ್ರೊ.ಎಸ್.ಅಯ್ಯಪ್ಪನ್, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಡಿಆರ್ ಡಿಒ-ಡಿಎಫ್ ಆರ್ ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೆಮ್ವಾಲ್, ನವದೆಹಲಿ ಅಕಾಡೆಮಿ ಆಫ್ ಮೈಕ್ರೋ ಬಯೋಲಾಜಿಕಲ್ ಸೈನ್ಸಸ್ ಅಧ್ಯಕ್ಷ ಪ್ರೊ.ಆರ್.ಸಿ.ಕುಹಾದ್, ಎಎಂಐ ಅಧ್ಯಕ್ಷ ಪ್ರೊ. ಪ್ರವೀಣ್ ರಿಷಿ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಪ್ರೊ. ನಮಿತಾ ಸಿಂಗ್, ಪ್ರೊ.ಎಸ್. ಸತೀಶ್ & ಪ್ರೊ.ಎಸ್.ಚಂದ್ರ ನಾಯಕ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
Key words: Mysore University- Tomorrow – Microbiologists of India-62nd –Annual- International- Conference
ENGLISH SUMMARY…
UoM: Microbiologists of India 62nd Annual International Conference tomorrow
Mysuru, September 20, 2022 (www.justkannada.in): The 62nd Annual International Conference of the Association of Microbiologists of India will be held at the Vignana Bhavana in Manasa Gangotri campus on September 21.
A lecture on the topic, “Microorganisms and Society: Present Trends and Future Expectations (MSCTFP-2022),” will be conducted by the University of Mysore, CSIR-CFTRI-DRDO-DFRL, KSTA, in association with the JSS AHER.
Padmashree awardee Dr. C.N. Manjunath, Director, Jayadeva Institute of Cardiology and Research, Bengaluru, Prof. G. Hemanth Kumar, Vice-Chancellor, University of Mysore, Padmashree Prof. S. Ayyappan, former VC Prof. K.S. Rangappa, DRDO-DFRL Director Dr. Anil Datt Samuel, Prof. R.C. Kuhad, President, New Delhi Academy of Microbiological Sciences, Prof. Praveen Rishi, President, IMA, Prof. Namita Singh, General Secretary, Prof. S.Satish and Prof. S. Chandra Nayak and others will participate.
Keywords: University of Mysore/Microbiology/ International conference