ಹಿಜಾಬ್ ಕುರಿತು ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ನವದೆಹಲಿ,ಸೆಪ್ಟಂಬರ್,22,2022(www.justkannada.in):  ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನ ಕಾಯ್ದಿರಿಸಿದೆ.

ಶಾಲಾ-ಕಾಲೇಜುಗಳಲ್ಲಿ ತರಗತಿಗಳಲ್ಲಿ ಹಿಜಾಬ್ ನಿಷೇಧಿಸಿದ್ಧ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದಿದ್ಧ  ಹೈಕೋರ್ಟ್ ತೀರ್ಪು  ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಮಾರು 10 ದಿನಗಳ ಕಾಲ ಈ ಅರ್ಜಿ ವಿಚಾರಣೆ ನಡೆಸಿ, ಅರ್ಜಿದಾರರ ವಕೀಲರು ಮತ್ತು ಸರ್ಕಾರ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಇದೀಗ ತೀರ್ಪನ್ನ ಕಾಯ್ದಿರಿಸಿದೆ.no-action-against-private-companies-lock-down-supreme-court-central-government

ಸಮವಸ್ತ್ರ ಸಂಹಿತೆ ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನೀಯರು ಹೈಕೋರ್ಟ್ ಮೆಟ್ಟಿಲೇರಿದ್ದರು.  ಆದರೆ ಹೈಕೋರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು. ನಂತರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Key words: Supreme Court – reserved -judgment -Hijab

ENGLISH SUMMARY..

SC reserves judgement over Hijab
New Delhi, September 22, 2022 (www.justkannada.in): The Hon’ble Supreme Court has reserved the judgement of the appeal submitted questioning the High Court order over the Hijab row.
The High Court of Karnataka had upheld the Govt. of Karnataka’s orders prohibiting wearing of Hijab in schools and Colleges. An appeal was made in the Hon’ble Supreme Court questioning the High Court order. After 10 days of hearing of the appeal, after hearing to the arguments of the advocate representing the appeal and the Government prosecutor, the two-member bench of the Hon’ble Supreme Court has reserved the judgement.Supreme Court - stay - SSLC -examination - state.
The Muslim girl students had appealed in the High Court questioning the Government of Karnataka’s orders instructing the educational institutions to implement the Uniform Code. The Hon’ble High Court had upheld the order of the government, following which the students had appealed in the Hon’ble Supreme Court.
Keywords: Hijab/ Supreme Court/ High Court/ Judgement reserved