ಕೇರಳ,ಸೆಪ್ಟಂಬರ್,23,2022(www.justkannada.in): ದೇಶಾದ್ಯಂತ ಪಿಎಫ್ ಐ ಮುಖಂಡರ ಮನೆ , ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಿದ್ದನ್ನು ಖಂಡಿಸಿ ಕೇರಳದಲ್ಲಿ ಪಿಎಫ್ ಐ ಪ್ರತಿಭಟನೆ ನಡೆಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಬಸ್ಗಳ ಮೇಲೆ PFI ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಹಲವು ವಾಹನಗಳ ಮೇಲೆ ಪ್ರತಿಭಟನಾಕಾರರು ವಿವಿಧೆಡೆ ದಾಳಿ ನಡೆಸಿದ್ದಾರೆ. ಅನೇಕ ಕಾರ್ಯಕರ್ತರನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಪಿಎಫ್ ಐ ಪ್ರತಿಭಟನೆ ಹಿನ್ನೆಲೆ ಕೇರಳ ಪೊಲೀಸರು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ನಿನ್ನೆ ದೇಶಾದ್ಯಂತ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಿಎಫ್ ಐ ,ಮತ್ತು ಎಸ್ ಡಿಪಿಐ ನಾಯಕರ ಮನೆ, ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಿತ್ತು. ಹಲವು ಮುಖಂಡರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
Key words: PFI -protest – Kerala- condemning -NIA -attack