ವಿಜಯಪುರ,ಸೆಪ್ಟಂಬರ್,27,2022(www.justkannada.in): ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳನ್ನ ನಿಷೇಧಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಪಿಎಫ್ ಐ ಮುಖಂಡರ ನಿವಾಸದ ಪೊಲೀಸರ ದಾಳಿ ವಿಚಾರ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎರಡು ಸಂಘಟನೆಗಳು ದೇಶ ವಿರೋಧಿ ಚಟುವಟಿಕೆ ಮಾಡುತ್ತಿವೆ. ಬಿಹಾರದಲ್ಲಿ ಪ್ರಧಾನಿ ಮೋದಿಗೆ ಬಾಂಬ್ ಹಾಕಲು ಯತ್ನ ನಡೆಸಲಾಗಿತ್ತು. ಕೇಂಧ್ರ ಸರ್ಕಾರ ದೃಢ ನಿಲುವು ತೆಗೆದುಕೊಂಡು ದಾಳಿ ಮಾಡಿದೆ.
ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆ ದಾಳಿ ಮಾಡಿದೆ ದಾಳಿ ವೇಳೆ ವಿದೇಶಿ ಹಣ ದಾಖಲೆ ಸಿಕ್ಕಿದೆ. ಪಿಎಫ್ ಐ ಮತ್ತು ಎಸ್.ಡಿಪಿಐ ಸಂಘಟನೆಗಳನ್ನ ನಿಷೇಧಿಸಬೇಕು ಅನ್ನೂದು ದೇಶಭಕ್ತರ ಆಗ್ರಹವಾಗಿದೆ ಎಂದು ಯತ್ನಾಳ್ ತಿಳಿಸಿದರು.
Key words: PFI – SDPI- ban- MLA -Basana Gowda Patil Yatnal