ಉತ್ತರ ಪ್ರದೇಶ, ಅಕ್ಟೋಬರ್,10,2022(www.justkannada.in): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್(82) ನಿಧನರಾಗಿದ್ದಾರೆ.
ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರನ್ನು ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 2 ರಂದು ತೀವ್ರ ಅನಾರೋಗ್ಯದ ಕಾರಣ ಮುಲಾಯಂ ಸಿಂಗ್ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮುಲಾಯಂ ಸಿಂಗ್ ಯಾದವ್ ಕೊನೆಯುಸಿರೆಳೆದಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಉತ್ತರಪ್ರದೇಶ ಸಿಎಂ ಆಗಿದ್ದರು. 10 ಬಾರಿ ಶಾಸಕ 7 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಭಾರತ ಸರ್ಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
Key words: Uttar Pradesh -Former CM- Mulayam Singh Yadav- passes away.
ENGLISH SUMMARY…
Former UP CM Mulayam Sing no more
Uttar Pradesh, October 10, 2022 (www.justkannada.in): Uttar Pradesh’s former Chief Minister and Samajwadi Party leader Mulayam Singh Yadav (82) passed away today.
He was ailing from breathing problem from some time and was admitted to the Medanta Hospital in Gurugaon. He was shifted to the ICU on October 2. However, he passed away today.
Mualayam Singh Yadav was the Chief Minister of Uttar Pradesh twice and was elected to the assembly 10 times and 7 times to the Lok Sabha. He also had served as the Defence Minister of India.
Keywords: Mulayam Singh Yadav/ Uttar Pradesh/ passes away